ತುಮಕೂರು: ಬಡ ರೈತರಿಗೆ ಮಂಜೂರಾಗಬೇಕಾದ ಜಮೀನು ಬೆಂಗಳೂರಿನ ಮಂದಿಗೆ ಮಂಜೂರು ಮಾಡಿ ಅವ್ಯವಹಾರ ಮಾಡಲಾಗುತ್ತಿದೆ ಎಂದು ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲೇ ಸಾವಿರಾರು ಎಕರೆ ಜಮೀನು ಮಂಜೂರಾತಿಯಲ್ಲಿ ಅವ್ಯವಹಾರ ಆಗಿದೆ. ಒಂದು ಎಕರೆಗೆ 5 ಲಕ್ಷ ರೂ.ನಂತೆ ಲಂಚ ಪಡೆದು ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಸಾವಿರಾರು ಎಕರೆ ಮಂಜೂರಾತಿ ಜಮೀನು ಅವ್ಯವಹಾರ ನಡೆದಿದ್ದು, ಮೇಲ್ನೋಟಕ್ಕೆ 50 ಕೋಟಿ ಅಂತಾ ಗೊತ್ತಾಗಿದೆ. ಸುಮಾರು 350–400 ಎಕರೆ ಜಮೀನನ್ನ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಶಾಸಕರು ಆರೋಪಿಸಿದರು.
ತಹಶೀಲ್ದಾರ್ ರಿಂದ ಗ್ರಾಮ ಸಹಾಯಕರವರೆಗೂ ಈ ಅವ್ಯವಹಾರದಲ್ಲಿ ಭಾಗ ಆಗಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇನ್ನೂ, ಕ್ರಮ ಆಗಿಲ್ಲ. ಈ ಬಗ್ಗೆ ಲೋಕಾಯುಕ್ತಗೆ ದೂರು ನೀಡ್ತೇನೆ. ಸಮಗ್ರ ತನಿಖೆ ಆಗಬೇಕು ಅಂತಾ ಒತ್ತಾಯಿಸುತ್ತೇನೆ ಎಂದು ಎಂ.ಟಿ ಕೃಷ್ಣಪ್ಪ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4