ತುಮಕೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರವಾಗಿ ಜೆಡಿಎಸ್ ಡಿ.ಕೆ.ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡುತ್ತಿದೆ. ಈ ನಡುವೆ ಶಾಸಕ ಎಸ್.ಆರ್. ಶ್ರೀನಿವಾಸ್ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಯಾವ ಆ್ಯಂಗಲ್ ನಲ್ಲಿ ಹೇಳ್ತಾರೆ. ಜನತಾದಳದ ಮೇಲೆ ಬಂದಿರುವ ಆಪಾದನೆಯಿಂದ ಪಾರಾಗಲು ಈ ರೀತಿ ಡ್ರಾಮ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ದೇವರಾಜೇಗೌಡರು ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನ ಭೇಟಿ ಮಾಡಿದ್ದಾರೆ. ಇನ್ನು ಅಮಿತ್ ಷಾ ಗೆ ಸೇರಿ ಎಲ್ಲರಿಗೂ ಕಳಿಸಿರುವುದಾಗಿ ಅವರೇ ಹೇಳಿದ್ದಾರೆ. ಅದೇ ಮನುಷ್ಯ ಈಗ ಡಿ.ಕೆ. ಶಿವಕುಮಾರ್ ಹೆಸರು ಹೇಳ್ತಿದ್ದಾರೆ ಎಂದರು.
ಕೇಸ್ ನ ಡೈವರ್ಟ್ ಮಾಡೋಕೆ ಇವರು ಮಾಡುತ್ತಿರುವ ನಾಟಕ ಇದಾಗಿದ್ದು, ಕುಮಾರಸ್ವಾಮಿ ಸೃಷ್ಟಿ ಮಾಡಿರುವ ಬಯಲು ನಾಟಕ ಎಂದರು. ಕುಮಾರಸ್ವಾಮಿಗೆ ಏನಾದರೂ ಮಾನ ಮರ್ಯಾದೆ ಇದ್ದರೇ, ಅವರ ಮಗ ಮಾಡಿರುವ ಕೃತ್ಯ ಖಂಡಿಸಿ ಪಕ್ಷದಿಂದ ಅಮಾನತು ಮಾಡಬೇಕಿತ್ತು. ಒಂದು ಬಾರಿ ಹೇಳ್ತಾರೆ ಅವರು ಕುಟುಂಬಕ್ಕೆ ನಮಗೂ ಸಂಬಂಧ ಇಲ್ಲ ಅಂತಾ.. ರೇವಣ್ಣ ಅವರಪ್ಪನಿಗೆ ಜನಿಸಿಲ್ವಾ, ರೇವಣ್ಣ ಅವರಣ್ಣ ಅಲ್ವಾ..?. ರೇವಣ್ಣನಿಗೂ ನಮಗೆ ಸಂಬಂಧ ಇಲ್ಲಾ. ನಾನು ನಮ್ಮ ಅಪ್ಪ ಅಷ್ಟೇ. ಒಳ್ಳೆಯದಾದ್ರೆ ರೇವಣ್ಣ ಇರಲಿ. ಬೇರೆ ಟೈಮ್ ನಲ್ಲಿ ಹಾಸನ ಅಂದ್ರೆ ರೇವಣ್ಣ. ರೇವಣ್ಣ ಅಂದ್ರೆ ಹಾಸನ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದರು. ಆಪಾದನೆ ಬಂದ ತಕ್ಷಣಕ್ಕೆ ರೇವಣ್ಣ ಈ ಕುಟುಂಬದಿಂದ ಆಚೆ ಹೋಗಿಬಿಟ್ಟರಾ ಎಂದು ಪ್ರಶ್ನಿಸಿದರು.
ಎಂತೆಂತಾ ಡ್ರಾಮ ಸೃಷ್ಟಿ ಮಾಡ್ತಾರೆ. ರಾಜ್ಯದ ಜನರು ಅಷ್ಟೊಂದು ಮೂರ್ಖರಾ ತಿಳುವಳಿಕೆ ಇರಲ್ವಾ. ಯಾರು ವೀಡಿಯೋ ರಿಲೀಸ್ ಮಾಡಿದ್ದಾರೆ, ಅವರನ್ನ ಬಂಧಿಸಲು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಡಿಕೆಶಿ ವಿರುದ್ಧ ಬಾಯಿಗೆ ಬಂದಾಗೆ ಮಾತಾಡಿದ್ದಾರೆ. ಇವರ ಮೇಲೆ ಬಂದ ಆಪಾದನೆ ತಪ್ಪಿಸಿಕೊಳ್ಳಲು, ಪಕ್ಷಕ್ಕೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಡಿಕೆಶಿರನ್ನ ಎಳೆದು ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಅಸ್ತಿತ್ವ ಎಲ್ಲಿ ಹೊರಟು ಹೋಗಿಬಿಡುತ್ತೋ. ನಮ್ಮ ಜನಾಂಗ ಎಲ್ಲಿ ಕೈ ಬಿಟ್ಟುಬಿಡುತ್ತೋ ಅಂತಾ ಭಾವನೆ ಇಟ್ಟುಕೊಂಡು ಅದೇ ಜನಾಂಗದ ಇನ್ನೊಬ್ಬ ಮುಖಂಡರನ್ನ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ನಮ್ಮ ಜನಾಂಗದಲ್ಲಿ ಯಾರು ಪ್ರಬಲರಾಗಿ ಬೆಳೆಯುತ್ತಾರೋ ಅವರ ಮೇಲೆ ಆಪಾದನೆ ಮಾಡೋದು, ಮುಗಿಸುವ ಕೆಲಸ, ತುಳಿಯುವ ಕೆಲಸ ಮಾಡ್ತಾ ಬಂದಿದ್ದಾರೆ. ಇದು ದೇವರು ಕೊಟ್ಟ ಶಿಕ್ಷೆ ಎಂದರು. ನಮ್ಮ ಸಮಾಜದಲ್ಲಿ ಯಾರು ತಲೆ ಎತ್ತಬಾರದೆಂದು ಎಲ್ಲಾ ಮುಖಂಡರನ್ನ ತುಳಿಯುತ್ತಾ ಬಂದಿದ್ದಾರೆ ಎಂದರು.
ಇವರ ಪಾಪದ ಕೊಡ ತುಂಬಿದೆ. ಪ್ರಜ್ವಲ್ ಪ್ರಕರಣ ಮುಖಾಂತರ ಇವರ ಅಂತ್ಯ ಹಾಗಲಿಕ್ಕೆ ನಾಂದಿಯಾಡಿದೆ. ಕುಮಾರಸ್ವಾಮಿ ಇನ್ನಾದರೂ ಈ ಆಟ, ನಾಟಕಗಳನ್ನು ಬಿಟ್ಟು ಸರಿಯಾಗಿ ನಡೆದುಕೊಳ್ಳಲಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


