ಮೈಸೂರು: ಪ್ರಜ್ವಲ್ ರೇವಣ್ಣ ಕೇಸ್ ಗೆ ಸಂಬಂಧ ಪಟ್ಟಂತೆ ಭ್ರಷ್ಟರ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಬಳಿ ಇರುವ ಪೆನ್ ಡ್ರೈವ್ ನಲ್ಲಿ ಎಲ್ಲಾ ಮಾಹಿತಿಗಳು ಇವೆ. ಭ್ರಷ್ಟರ ಬಗ್ಗೆ ಮಾಹಿತಿ ನೀಡಲು ನಾನು ಸಿದ್ಧ, ನಾನು ಸಾಕ್ಷಿ ಸಮೇತ ನಿಮಗೆ ನೀಡಿದರೆ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ. ನಿಮಗೆ ಧೈರ್ಯ ಇದೆಯಾ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ದಾಖಲೆ ಸಮೇತವಾಗಿ ಹಲವಾರು ರಾಜಕಾರಣಿಗಳ ಕಳ್ಳಾಟವನ್ನು ನೀಡಿದರು ಯಾಕೆ ಅದರ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇರುವವರೆಗೆ ಈ ವ್ಯವಸ್ಥೆ ಸರಿ ಮಾಡಲು ಸಾದ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಈಗಾಗಲೇ ವಕೀಲ ದೇವರಾಜೇ ಗೌಡರನ್ನು ಬಂಧಿಸಿದ್ದಾರೆ. ಅವರಿಂದ ಯಾವ ಉತ್ತರ ಬಯಸುತ್ತಿದ್ದೀರಾ. ಪೆನ್ ಡ್ರೈವ್ ಗೆ ಸಂಬಂಧ ಪಟ್ಟಂತೆ ವಿಚಾರಣೆ ಮಾಡುತ್ತಿದ್ದರೋ ಅಥವಾ ಅತ್ಯಾಚಾರ ವಿಚಾರವಾಗಿ ತನಿಖೆ ನಡೆಸುತ್ತಿದ್ದರೋ, ಡಿಕೆಶಿಯ ಆಡಿಯೋ ತುಣುಕನ್ನು ಕೊಡು ಅಂತ ಒತ್ತಾಯ ಹಾಕುತ್ತಿದ್ದರೋ ಎಂದು ಹಾಸನ ಎಸ್ ಪಿ ಹಾಗೂ ಎಸ್ ಐಟಿಗೆ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಅವರ ಬಣ್ಣ ಬಯಲು ಆಗುತ್ತಿದೆ ಎಂದು ದೇವರಾಜೇ ಗೌಡರನ್ನು ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ. ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


