ತುಮಕೂರು: ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬಳಿ ಹಾದು ಹೋಗುವ ಚಾಮರಾಜನಗರ , ಜೀವರ್ಗಿ ರಾಷ್ಟ್ರೀಯ ಹೆದ್ದಾರಿ 150 A ರಲ್ಲಿ ಮಾಯಸಂದ್ರ, ಟಿ.ಬಿ.ಕ್ರಾಸ್ ನ ಮಧ್ಯದಲ್ಲಿ ಚೆಕ್ ಪೋಸ್ಟ್ ನಿಂದ ಟಿ.ಬಿ.ಕ್ರಾಸ್ ಕಾಲುವೆಯವರೆವಿಗೂ ಆಳೆತ್ತರದ ಗಿಡಗಂಟಿ ಬೆಳೆದು ನಿಂತಿದ್ದು, ಸಾರ್ವಜನಿಕರ ಹಿತಾ ದೃಷ್ಟಿಯಿಂದ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಮತ್ತು ಸದಸ್ಯರು ಸ್ವಂತ ಖರ್ಚಿಯಿಂದ ದುರಸ್ತಿಗೊಳಿಸಿದ್ದಾರೆ.
ಗಿಡಗಂಟಿಗಳು ಬೆಳೆದು ನಿಂತ ಪರಿಣಾಮ ಎದುರಿನಿಂದ ಬರುತ್ತಿರುವ ವಾಹನಗಳು ಕಾಣದೇ ಇಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು. ಈ ಸಂಬಂಧ ಈ ಭಾಗದ ಶಾಸಕರು, ಜನಪ್ರತಿನಿಧಿಗಳಿಗೆ ಸಾರ್ವಜನಿಕರು ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಸಂಬಂಧ ಸ್ಥಳೀಯ ಸೊರವನಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಜಾಬೀರ್ ಹುಸೇನ್ ಮತ್ತು ಉಪಾಧ್ಯಕ್ಷೆ ಶಶಿಕಲಾ ಹನುಮೇಗೌಡ ಮತ್ತು ಸದಸ್ಯರೆಲ್ಲ ಒಟ್ಟುಗೂಡಿ ಸಮಾಲೋಚನೆ ನಡೆದಿ ಕೊನೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಅಡ್ಡಲಾಗಿರುವ ಗಿಡಗಳನ್ನು ಹಿಟಾಚಿ ಸಹಾಯದಿಂದ ಕೀಳಿಸಿ ಸ್ವಚ್ಛಗೊಳಿಸಿದ್ದು, ಪಂಚಾಯತ್ ನ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಬೀರ್ ಹುಸೇನ್ ಈ ಬಗ್ಗೆ ಮಾತನಾಡಿ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಾಗೂ ಯಾವುದೇ ಪ್ರಾಣ ಹಾನಿಯಾಗದಿರಲಿ ಎಂದು ಈ ಕೆಲಸವನ್ನು ಉಪಾಧ್ಯಕ್ಷರ ಹಾಗೂ ಸದಸ್ಯರ ಸಹಕಾರದೊಂದಿಗೆ ಮಾಡಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಾಬೀರ್ ಹುಸೇನ್, ಉಪಾಧ್ಯಕ್ಷೆಯ ಪತಿ ಹನುಮೇಗೌಡ, ಸದಸ್ಯರಾದ ಸುರೇಶ್, ಜಿತೇಂದ್ರೆ, ಸದಸ್ಯೆ ಮಹಾಲಕ್ಷ್ಮಮ್ಮ ಮೊದಲಾದವರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700