ಬೀದರ: ನಗರದ ಭವಾನಿ ಮಂದಿರದಲ್ಲಿ ರವಿವಾರ ನೂತನವಾಗಿ ರಚನೆಯಾದ ಜಿಲ್ಲಾ ಉಪ್ಪಾರ ಸಮಾಜ ಸಂಘದ ಪದಾಧಿಕಾರಿಗಳ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಅಧ್ಯಕ್ಷ ತಾನಾಜಿ ಸಾಗರ್,ಗೌರವ ಅಧ್ಯಕ್ಷ ಜಗನಾಥ ಎಚ್ ಉಪ್ಪಾರ ಹಾಗೂ ಶಿವಾಜಿ ಭಾತಂಬ್ರಾ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮಾರಂಭವನ್ನು ಉದ್ಘಾಟಿಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಗೌರವ ಅಧ್ಯಕ್ಷ ಶಿವಾಜಿ ಭಾತಂಬ್ರಾ, ನಮ್ಮ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿದ್ದು ನಮ್ಮ ಸಮಾಜದ ತುಂಬಾ ಜನರು ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ.ಆದರೂ ತಮ್ಮ ಮಕ್ಕಳ ಉಜ್ಜಲು ಭವಿಷ್ಯಕ್ಕಾಗಿ ಹಗಲಿರುಳೂ ಎನ್ನದೆ ಶ್ರಮಪಟ್ಟು ಮಕ್ಕಳಿಗೆ ಶಿಕ್ಷಣ ನೀಡಿ ಹೆಚ್ಚು ಅಂಕ ಪಡೆಯಲು ಕಾರಣಿಕರ್ತರಾದ ಪಾಲಕರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದ ಅವರು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗುರುತಿಸಿ ಜಿಲ್ಲಾ ಉಪ್ಪಾರ ಸಮಾಜ ಸಂಘ ಸನ್ಮಾನಿಸಿ ಗೌರವಿಸುತ್ತಿರುವುದು ಬಹಳ ಸಂತಸದ ಕ್ಷಣವಾಗಿದೆ ಎಂದರು.
ಉಪ್ಪಾರ ಸಮಾಜದ ಮುಖಂಡರು ತಮ್ಮ ಸಮಾಜದ ಬೆಳವಣಿಗೆಗೆ ಎಲ್ಲರೂ ಜಾಗೃತರಾಗಿ ಒಗ್ಗೂಡಿ ಸಂಘಟನೆಗೆ ಬಲ ಪಡಿಸುವ ಮೂಲಕ ಮುಂದುವರೆಸಿಕೊಂಡು ಹೋಗಬೇಕು ಅಂದಾಗೆ ನಮ್ಮ ಸಮಾಜದ ಬೆಳವಣಿಗೆ ಅಗಲ್ಲಿಕ್ಕೆ ಸಾಧ್ಯ ನಿಮ್ಮಿಂದ ಸಮಾಜದ ಏಳಿಗೆಗೆ ಶೃಮಿಸಲು ಆಗದೆ ಇದ್ದರು ಪರವಾಗಿಲ್ಲ ಆದರೆ ಇನ್ನೊಬ್ಬರು ಸಹ ನಿಮ್ಮ ಮಾರ್ಗದಲ್ಲಿಯೇ ನಡೆಯುವಂತ ಕೆಲಸ ಆಗಬಾರದು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿ ರವಿ ಉಪ್ಪಾರ ಸಮಾಜವನ್ನು ಉದ್ದೇಶಿಸಿ ಮಾತನಾಡಿದ ಅವರು ಕಷ್ಟದ ಜೀವನದ ಜೊತೆ ಹಗಲಿರುಳು ಎನ್ನದೆ ಶೃಮಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಗೈತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಸಂತಸ ತಂದಿದೆ ನಾವು ನಮ್ಮ ಸಮಾಜವನ್ನು ಬೆಳೆಸಬೇಕು ಎಂದರೆ ಸಂಘಟನೆ ಮತ್ತು ಶಿಕ್ಷಣದ ಜೊತೆಗೆ ಒಗ್ಗೂಡಿ ಮುಂದುವರೆದರೆ ಮಾತ್ರ ಸಮಾಜದ ಏಳಿಗೆ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಮ್.ಬಿ.ಬಿ.ಎಸ್ ವಿದ್ಯಾರ್ಥಿ ಮಹಾಂತೇಶ ಉಪ್ಪಾರ ಮಾತನಾಡಿ ಮೊನ್ನೆ ಕೋಲ್ಕತಾದಲ್ಲಿ ನಡೆದ ಘಟನೆಯನ್ನು ಸ್ಮರಿಸಿ ಬೇಸರ ವ್ಯಕ್ತಪಡಿಸಿದ ಅವರು ವೈದ್ಯರ ವೃತ್ತಿ ಒಂದು ರೀತಿಯ ದೇವರ ರೂಪದ ವೃತಿಯಾಗಿದ್ದು ಇದ್ದನು ನಾನು ಅಚ್ಚುಕಟ್ಟಾಗಿ ನಿರ್ವಹಿಸಿ ನಮ್ಮ ಸಮಾಜವನ್ನು ಮೇಲೆತ್ತುವ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ತಿಕಾ ಉಪ್ಪಾರ ಮಾತನಾಡಿ ಯಾವುದೇ ಒಂದು ಸಂಘಟನೆ ಬೇಳೆಯಬೇಕು ಎಂದರೆ ಇಂತಹ ಸಮಾರಂಭಗಳ ನಡಿದರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ ಕಾರಣವೆಂದರೆ ಇಂತಹ ಸಮಾರಂಭಗಳಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು ಮತ್ತು ಹಿರಿಯರ ಮಾರ್ಗದರ್ಶನದಿಂದ ಸಂಘಟನೆಯ ಬೆಳವಣಿಗೆಗೆ ಪ್ರೊತ್ಸಹಿಸಿದಂತಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ತಿಪ್ಪಣ ಉಪ್ಪಾರ,ಮಾರುತಿ ಸಾಗರ ಮತ್ತು ದೀಪಿಕಾ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ತಾನಾಜಿ ಸಾಗರ್ ಅಧ್ಯಕ್ಷಿಯ ನುಡಿ ನುಡಿದರು.
ಬಸವರಾಜ ಉಪ್ಪಾರ ಅವರು ನಿರೂಪಿಸಿ ಸ್ವಾಗತಿಸಿದರು.ಅಭಂಗ ಉಪ್ಪಾರ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಎಮ್.ಬಿ.ಬಿ.ಎಸ್ ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ಜಿಲ್ಲಾ ಉಪ್ಪಾರ ಸಮಾಜದ ಉಪಾಧ್ಯಕ್ಷ ಅನೀಲ್ ಮುಸ್ತಾಪೂರ,ಕಲಪ್ಪಾ ಉಪ್ಪಾರ, ಶರಣಪ್ಪ ಅಣದೂರ, ನರಸಿಂಗ ಉಪ್ಪಾರ, ಸಾಗರ ಕೊಳ್ಳುರ, ಸಂಜು ಚಿಂತಾಕಿ ಮತ್ತು ಭೂಮಪ್ಪಾ ಬೆಲ್ದಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q