ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ಈಶಪ್ಪ (22) ಹಾಗೂ ಸುವರ್ಣ(20) ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಈಶಪ್ಪ ಮತ್ತು ಸುವರ್ಣ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಬೇರೆ ಯುವಕನೊಂದಿಗೆ ಜೊತೆ ಸುವರ್ಣಳ ಮದುವೆಯಾಗಿತ್ತು . ಸುವರ್ಣ ಬೆಂಗಳೂರು ನಗರದಲ್ಲಿ ಪತಿ ಜೊತೆ ವಾಸವಿದ್ದಳು. ಶುಕ್ರವಾರ (ಫೆ.17) ಗಂಡನಿಗೆ ತಿಳಿಸದೇ ಹುರುಸಗುಂಡಗಿ ಗ್ರಾಮಕ್ಕೆ ಬಂದಿದ್ದಳು. ಶನಿವಾರ (ಫೆ.18) ಅದೇನಾಯಿತು ಏನೋ ಬೆಳಗ್ಗೆ ವಿಷ ಸೇವಿಸಿ ಸುವರ್ಣ, ಈಶಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


