ಬೆಂಗಳೂರು, ಸೆಪ್ಟೆಂಬರ್ 19: ಪ್ರೀತಿ ಹುಟ್ಟುವುದು ನಂಬಿಕೆಯ ಮೇಲೆಯೇ. ಪ್ರೀತಿಸುವ ಮುಗ್ದ ಮನಸ್ಸುಗಳನ್ನು ಒಬ್ಬರನ್ನೊಬ್ಬರ ನಂಬಿಕೆಯನ್ನಿಟ್ಟು ವಿಶ್ವಾಸವನ್ನು ಹೊಂದಿದ ಮೇಲೆಯ ಪ್ರೀತಿಯ ಹಾದಿಯಲ್ಲಿ ಸಲುಗೆ ಅನ್ನೋದು ಬೆಳೆಯುತ್ತೆ. ಸಲುಗೆ ಬೆಳೆಸಿದ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಅಶ್ಲೀಲ ವಿಡಿಯೋ ಸೆರೆಹಿಡಿದು ಇನ್ಸ್ಟಾದಲ್ಲಿ ಹಾಕಿದ್ದಕ್ಕೆ ಕೊಲೆಯಾಗಿದ್ದಾನೆ.
ಪ್ರೀತಿಸಿದ್ದ ಹುಡುಗಿಯ ಮಾನವನ್ನು ಕಾಪಾಡಬೇಕಾಗಿದ್ದು ಪ್ರಿಯಕರನ ಕರ್ತವ್ಯ ಆಗಿರುತ್ತದೆ. ಆದರೆ ಪ್ರೀತಿಸಿದಾಕೆಯ ಅಶ್ಲೀಲ ಫೋಟೋಗಳನ್ನು ಮತ್ತು ವಿಡಿಯೋವನ್ನು ತೆಗೆದುಕೊಂಡಿದ್ದ ಪ್ರಿಯಕರ ಆಕೆಯ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ ವಿಕೃತವಾದ ಆನಂದವನ್ನು ಹೊಂದಿದ್ದ. ಇದರಿಂದ ಪ್ರಿಯಕರನ ಜೊತೆಗೆ ಪ್ರೇಯಸಿ ಜಗಳವನ್ನುಆಡಿದ್ದಳು.
ಪ್ರಿಯಕರನ ಕೃತ್ಯದಿಂದ ಬೇಸತ್ತಿದ್ದ ಪ್ರಿಯತಮೆ ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರನನ್ನು ಹತ್ಯೆಗೈದಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟಿನಲ್ಲಿ ನಡೆದಿದೆ. ತನ್ನ ಪ್ರೇಯಸಿಯ ಅಶ್ಲೀಲ ಫೋಟೋವನ್ನು ಇನ್ಸ್ಟಾದಲ್ಲಿ ಹಾಕಿದ್ದ ತಪ್ಪಿಗೆ ಪ್ರೇಯಸಿ ಮತ್ತು ಆಕೆಯ ಸ್ನೇಹಿತರಿಂದ ಡಾ.ವಿಕಾಸ್ ಎಂಬಾತ ಕೊಲೆಯಾಗಿದ್ದಾನೆ. ಪ್ರತಿಭಾ,ಸುಶೀಲ್, ಗೌತಮ್ ಮತ್ತು ಸೂರ್ಯ ಕೊಲೆಗೈದಿರುವ ಆರೋಪಿಗಳಾಗಿದ್ದು. ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೂರ್ಯ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಪ್ರೇಯಸಿ, ಆಕೆಯ ತಾಯಿಯ ಅಶ್ಲೀಲ ಫೋಟೋ ಪೋಸ್ಟ್
(ಕೊಲೆಯಾದ ಡಾ. ವಿಕಾಸ್) ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ವಿಕಾಸ್ ಚೆನ್ನೈ ನಲ್ಲಿ ವೈದ್ಯನಾಗಿ ಕೆಲಸ ಮಾಡಿಕೊಂಡಿದ್ದ. ಪ್ರತಿಭಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸುತ್ತಿದ್ದು ಕೆಲದಿನಗಳ ಹಿಂದೆ ಎರಡೂ ಕುಟುಂಬದಿಂದಲೂ ನವೆಂಬರ್‌ನಲ್ಲಿ ಮದುವೆಗೆ ಸಮ್ಮತಿ ಸಿಕ್ಕಿತ್ತು. ಈ ನಡುವೆ ಪ್ರತಿಭಾ ಹಾಗೂ ಆಕೆಯ ತಾಯಿಯ ಅಶ್ಲೀಲ ಫೋಟೊ ಮತ್ತು ವಿಡಿಯೋಗಳನ್ನ ಸೆರೆಹಿಡಿದಿದ್ದ ವಿಕಾಸ್ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.
ಜಗಳದ ಬಳಿಕ ಮಾತುಕತೆ ಆಹ್ವಾನ
ವೈದ್ಯ ವಿಕಾಸ್ ತನ್ನ ಪ್ರೇಯಸಿ ಪ್ರತಿಭಾ ಮತ್ತು ಆಕೆಯ ತಾಯಿಯ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದ. ಈ ವಿಚಾರ ಪ್ರತಿಭಾಗೆ ಗೊತ್ತಾಗುತ್ತದೆ. ತನ್ನ ಅಶ್ಲೀಲ ಫೋಟೋವನ್ನು ಪೋಸ್ಟ್ ಮಾಡಿದ್ದಕ್ಕೆ ಆಕ್ಷೇಪವನ್ನು ವ್ಯಕ್ತಪಡಿದ್ದಲ್ಲದೇ ತನ್ನ ತಾಯಿಯ ಫೋಟೋವನ್ನು ಹಾಕಿದ್ದಕ್ಕೆ ಇಬ್ಬರ ನಡುವೆ ಜಗಳವಾಗುತ್ತದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಬೇಕಿದೆ ಎಂದು ಹೇಳಿ ಪ್ರತಿಭಾ ಡಾ. ವಿಕಾಸ್ ನನ್ನು ಕರೆಸಿಕೊಂಡಿದ್ದಾಳೆ.
ಸ್ನೇಹಿತರ ಮೂಲಕ ಪ್ರಿಯಕರ ವಿಕಾಸ್ ಮೇಲೆ ಹಲ್ಲೆ
ಪ್ರತಿಭಾ ಹಾಗೂ ಆಕೆಯ ಕುಟುಂಬದವರು ವಿಕಾಸ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಪ್ರೀತಿಸಿದವನೇ ಮಾಡಿದ ಮೋಸದ ಕುರಿತು ಪ್ರತಿಭಾ ತನ್ನ ಗೆಳೆಯರಾದ ಸುಶೀಲ್, ಗೌತಮ್ ಮತ್ತು ಸೂರ್ಯನ ಬಳಿ ಹೇಳಿಕೊಂಡಿದ್ದಳು. ಮಾತನಾಡುವುದಾಗಿ ಮೂರು ದಿನಗಳ ಹಿಂದೆ ಮೈಕೋಲೇಔಟ್ ಬಳಿ ಕರೆಸಿಕೊಂಡಿದ್ದ ಆರೋಪಿಗಳು ವಿಕಾಸ್ ಮೇಲೆ ಮನಸೋ ಇಚ್ಛೆ ಹಲ್ಲೆಯನ್ನು ಮಾಡಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿಕಾಸ್ ಮೂರು ದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಾ ಸಾವು ಬದುಕಿನ ನಡುವೆ ಹೋರಾಟವನ್ನು ನಡೆಸುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಾ. ವಿಕಾಸ್ ಸಾವನ್ನಪ್ಪಿದ್ದ.
ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ
ತನ್ನ ಪ್ರೇಯಸಿಯ ಅಶ್ಲೀಲ ಫೋಟೋವನ್ನು ಇನ್ಸ್ಟಾದಲ್ಲಿ ಹಾಕಿದ್ದ ತಪ್ಪಿಗೆ ಪ್ರೇಯಸಿ ಮತ್ತು ಆಕೆಯ ಸ್ನೇಹಿತರಿಂದ ಡಾ.ವಿಕಾಸ್ ಎಂಬಾದ ಕೊಲೆಯಾಗಿದ್ದಾನೆ. ಪ್ರತಿಭಾ, ಸುಶೀಲ್, ಗೌತಮ್ ಮತ್ತು ಸೂರ್ಯ ಕೊಲೆಗೈದಿರುವ ಆರೋಪಿಗಳಾಗಿದ್ದು. ಪ್ರತಿಭಾ,ಸುಶೀಲ್, ಗೌತಮ್ ಎಂಬ ಮೂವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಸೂರ್ಯ ಎಂಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬೇಗೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದು ತನಿಖೆಯನ್ನು ಮುಂದುವರೆಸಿದ್ದಾರೆ.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy