ಕಲಬುರ್ಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೆಲಸಕ್ಕಿಂತ ಪ್ರಚಾರವೇ ಹೆಚ್ಚು. ಎಲ್ಲಿ ಸಿಕ್ಕಲ್ಲಿ ಅವರು ಬೆಂಕಿ ಇಡುವ ಕೆಲಸವನ್ನು ಮಾಡುತ್ತಾರೆ ಎಂದು ಕಲ್ಬುರ್ಗಿಯಲ್ಲಿ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ವಿರುದ್ಧವಾಗಿ ನಡೆಸಿದರು.
ಇಂದು ಕಲಬುರ್ಗಿ ನಗರದ ಎನ್. ವಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಒಂದು ನೊಣವನ್ನು ಹೊಡೆದಿಲ್ಲ.ಆದರೆ ಪ್ರಚಾರವೇ ಜಾಸ್ತಿಯಾಗಿದೆ. ಎಲ್ಲಿ ಸಿಕ್ಕಿದರೆ ಅಲ್ಲಿ ಬೆಂಕಿ ಇಡುವ ಕೆಲಸ ಪ್ರಧಾನಿ ಮೋದಿ ಮಾಡುತ್ತಾರೆ ಎಂದು ಕಿಡಿ ಕಾರಿದರು.
ಹೇಳಿದಂತೆ ಮಾಡೋದು ಕಷ್ಟ ಆದರೆ ಬೆಂಕಿ ಹಚ್ಚುವುದು ಸುಲಭ ಎಂದು ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.ಗುಜರಾತ್ ನಲ್ಲಿ ಐದು ವರ್ಷದಲ್ಲಿ 500 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಬಿಜೆಪಿಯವರು ಮೋಸಗಾರರು, ಬಿಜೆಪಿ ನಾಯಕರ ಮಾತಿಗೆ ಮರುಳಾಗಬೇಡಿ ಎಂದರು.
ಸಂವಿಧಾನ ರಕ್ಷಣೆ ಜನರ ಕೆಲಸ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕಲಬುರ್ಗಿಯಲ್ಲಿ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


