ಆಂಧ್ರಪ್ರದೇಶ: ತಾಯಿಯನ್ನು ಮಗ ಆಸ್ತಿಗಾಗಿ ಮನಬಂದಂತೆ ಥಳಿಸಿರುವ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗನ ವರ್ತನೆ ಯಾವುದೇ ಒಂದು ಮೃಗಕ್ಕಿಂತ ಕಮ್ಮಿಯಿರಲಿಲ್ಲ. ತಾಯಿಯನ್ನು ನೆಲಕ್ಕೆ ತಳ್ಳಿ, ಬೀಳಿಸಿ, ನಂತರ ತಂದೆಗೂ ಕಪಾಳಕ್ಕೆ ಬಾರಿಸಿದ್ದು, ಯಾರೇ ಮುಂದೆ ಬಂದು ಈ ಘಟನೆಯನ್ನು ತಡೆಯೋ ಪ್ರಯತ್ನ ಮಾಡಲಿಲ್ಲ.
ಶ್ರೀನಿವಾಸುಲು ರೆಡ್ಡಿ ಎಂಬಾತನೇ ತನ್ನ ತಂದೆ ತಾಯಿಗೆ ಮನಬಂದಂತೆ ಥಳಿಸಿದವನು. ಇದೀಗ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ತನ್ನ ಹೆತ್ತವರು ತನ್ನ ಅಣ್ಣನಿಗೆ ಭೂಮಿಯನ್ನು ನೀಡಿದ್ದರಿಂದ ಈತ ಕೋಪಗೊಂಡಿದ್ದು, ನಿರ್ಧಾರವನ್ನು ಬದಲಾಯಿಸಲು ಪದೇ ಪದೇ ಒತ್ತಾಯ ಮಾಡುತ್ತಿದ್ದ.
ತಂದೆ ತಾಯಿ ಜೊತೆ ಅನುಚಿತ ವರ್ತನೆ ಮಾಡಿದವರಿಗೆ ಶಿಕ್ಷೆಯಾಗಲಿದೆ. ಇಂತಹ ದೌರ್ಜನ್ಯದ ಕುರಿತು ಪೋಷಕರು ದೂರು ದಾಖಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


