ಚಿಕ್ಕೋಡಿ: ಆಸ್ತಿ ವಿಚಾರಕ್ಕೆ ಚಿಕ್ಕಪ್ಪ ಹಾಗೂ ಮಗನ ಮಧ್ಯೆ ನಡೆದ ಜಗಳ, ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಡೆದಿದೆ. ಕೇಶವ ಬೊಸಲೆ(47) ಕೊಲೆಯಾದ ದುರ್ದೈವಿಯಾಗಿದ್ದಾರೆ. ಖಂಡೊಬಾ ಬೊಸಲೆ(27)ಕೊಲೆ ಆರೋಪಿಯಾಗಿದ್ದಾರೆ.
ಕಳೆದ 20 ವರ್ಷಗಳಿಂದ ಜಮೀನಿನ ವಿಚಾರಕ್ಕೆ ಚಿಕ್ಕಪ್ಪ ಹಾಗೂ ಮಗನ ನಡುವೆ ಜಗಳ ನಡೆಯುತ್ತಲ್ಲೇ ಇದ್ದು, ನಿನ್ನೆ ಇಬ್ಬರು ಜೊತೆಗೂಡಿ ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ಜಗಳ ನಡೆದಿದ್ದು, ಕೋಪ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆಯನ್ನು ಐಗಳಿ ಪೋಲಿಸರು ಬಂಧಿಸಿದ್ದು, ಈ ಸಂಬಂಧ ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296