ಗಾಳಿ, ನೀರು, ಆಹಾರ ಸಕಲ ಜೀವ ಜಂತುಗಳಿಗೆ ಅತ್ಯಾವಶ್ಯಕ ಅದನ್ನು ಕಲುಷಿತಗೊಳಿಸದೇ ಉಳಿಸುವುದು ಎಲ್ಲರ ಕರ್ತವ್ಯ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆವತಿಯಿಂದ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ದೇಶದ ಆಹಾರ ಸ್ವಾವಲಂಬನೆ ಹಾಗೂ ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹಾಗೂ ಕೃಷಿ ತಜ್ಞರಾದ ಸ್ವಾಮಿನಾಥನ್ ಅವರನ್ನು ಸಚಿವರು ಸ್ಮರಿಸಿದರು.
ಆಹಾರ ದಿನ ಹಾಗೂ ರೈತ ಮಹಿಳಾ ದಿನವನ್ನು ಒಟ್ಟಾಗಿ ಆಚರಿಸಲಾಗುತ್ತಿದೆ ಅಂದರೆ ಆಹಾರ ಉತ್ಪಾದಿಸುವ ರೈತ ಮಹಿಳೆ ಹಾಗೂ ಆಕೆ ಉತ್ಪಾದಿಸುವ ಆಹಾರ ಎರಡನ್ನೂ ಗೌರವಿಸುವ ಕ್ಷಣ ಇದಾಗಿದೆ ಎಂದು ಸಚಿವರು ಹೇಳಿದರು
ಆಹಾರ ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು.ಎಲ್ಲಾ ಜೀವ ಸಂಕುಲಗಳು ಮೊದಲ ಆದ್ಯತೆ ಆಹಾರ.ನಮ್ಮ ಜೀವ ವಿಕಾಸದ ಜೊತೆಗೆ ಆಹಾರ ಪದ್ದತಿಯಲ್ಲೂ ಬದಲಾವಣೆಯಾಗಿದೆ ಎಂದು ಅವರು ಹೇಳಿದರು.
ಹಿಂದೆ ನಮ್ಮ ಹಿರಿಯರು ಆರೋಗ್ಯ ಪೂರ್ಣ ಆಹಾರ ಪದ್ದತಿ ಹೋಂದಿದ್ದರು. ಹೆಚ್ಚು ಆರೋಗ್ಯ ಪೂರ್ಣ , ದೀರ್ಘಾಯುಷ್ಯ ಹೋಂದುತ್ತಿದ್ದರು. ಇಂದು ದಾವಂತದ ಬದುಕು . ಆರೋಗ್ಯ ಆಯಸ್ಸು ಅಷ್ಟಕಷ್ಟೆ. ಇದು ಅರಿವಾಗುತಿದ್ದಂತೆ ಆಹಾರ ಜಾಗೃತಿ ಹೆಚ್ಚದೆ. ನಮ್ಮ ಸಿರಿಧಾನ್ಯ ಗಳಿಗೆ ಬೇಡಿಕೆ ಬಂದಿದೆ. ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ ರಾಜ್ಯ ಸರ್ಕಾರ ಸಿರಿ ಧಾನ್ಯ ಬೆಳೆಯುವ ಕೃಷಿಕರಿಗೆ ಎಕರೆಗೆ 10000 ರೂ ಪ್ರೋತ್ಸಾಹ ನೀಡುತ್ತಿದೆ ಎಂದು ಕೃಷಿ ಸಚಿವರು ಹೇಳಿದರು.
ಮುಂಬರುವ ದಿನಗಳಲ್ಲಿ ನಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೊಳಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ .ಬ್ರಾಂಡಿಗ್ ವ್ಯವಸ್ಥೆಗೂ ಸರ್ಕಾರ ನೆರವಾಗುತ್ತಿದೆ .ರೈತ ಉತ್ಪಾದಕ ಸಂಘಗಳನ್ನು ಬಲ ಪಡಿಸಿಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಕೃಷಿ ನವೋದ್ಯಮಕ್ಕೂ ಆದ್ಯತೆ ನೀಡತ್ತಿದ್ದು 10 ಕೋಟಿ ರೂ ಮೀಸಲಿರಿಸಲಾಗಿದೆ. ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚುಮಾಡುವುದು ಹಾಗೂ ಮೌಲ್ಯ ವರ್ಧನೆ ಮಾಡುವುದು ಇದೆಲ್ಲದರ ಮೂಲ ಆಶಯ ಎಂದು ಕೃಷಿ ಸಚಿವರು ತಿಳಿಸಿದರು. ಇದೇ ವೇಳೆ ದೇಶದ ಆಹಾರ ಸ್ವಾವಲಂಬನೆಗೆ ದೊಡ್ಡ ಕೊಡುಗೆ ನೀಡಿದ ಎಂ.ಎಸ್ ಸ್ವಾಮಿನಾಥನ್ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಚಾರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗೇಶ್ ಹೆಗ್ಡೆ, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ.ಜಿ.ಟಿ.ಪುತ್ರ. ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಸೆಕೆಂಡರಿ ಕೃಷಿ ನಿರ್ದೇಶಕಿ ಶ್ರೀಮತಿ ನಂದಿನಿ ಭಾಗವಹಿಸಿದ್ದರು.


