ವರದಿ: ಅಬಿದ್ ಮಧುಗಿರಿ
ಮಧುಗಿರಿ : ಪಟ್ಟಣದ ಖಾಸಗಿ ಬಸ್ ಸ್ಟಾಂಡ್ ಸಮೀಪದಲ್ಲಿ ತಾ. ಸಿ.ಐ.ಟಿ.ಯು ಅಧ್ಯಕ್ಷೇ ಎಸ್.ಡಿ ಪಾರ್ವತಮ್ಮ ನೇತೃತ್ವದಲ್ಲಿ ಅಕ್ಷರ ದಾಸೋಹ ಬಿಸಿ ಊಟ ತಯಾರಕರು ಸಮಾವೇಶಗೊಂಡು, ತಮ್ಮ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ತಾ.ಪಂ. ಕಚೇರಿವರೆಗೆ ಮೆರವಣಿಗೆ, ಪ್ರತಿಭಟನೆ ನಡೆಸಿ, ನಂತರ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಇಲ್ಲದ ಸಂದರ್ಭ ಕಚೇರಿ ವ್ಯವಸ್ಥಾಪಕರಾದ ಶ್ರೀನಿವಾಸ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಅಕ್ಷರ ದಾಸೋಹ ನೌಕರರು ಒಂಬತ್ತು ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರ ಸಲ್ಲಿಸಿದ್ದು, ನಾವು ತಾ.ಪಂ. ಮುಖಾಂತರ ಮತ್ತು ಜಿಲ್ಲಾಧಿಕಾರಿಗಳು ಸರ್ಕಾರದ ಹಂತಕ್ಕೆ ತಲುಪಿಸಲು ಕ್ರಮವಹಿಸಿ ಎಂದು ತಿಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನೌಕರರ ಸಂಘ ಮಧುಗಿರಿ ತಾಲೂಕು ಸಮಿತಿ ಅಧ್ಯಕ್ಷೇ ನಾಗರತ್ನ ಮಾತನಾಡಿ, 2023 ರ ಬಜೆಟ್ ನಲ್ಲಿ ಹಿಂದಿನ ಸರ್ಕಾರ ಬಿಸಿ ಊಟ ನೌಕರರಿಗೆ 1,000 ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು, ಆದರೆ ಈ ಘೋಷಣೆಯಾದ ಗೌರವ ಧನ ಬಿಡುಗಡೆಗೆ ಆದೇಶ ಇನ್ನೂ ನೀಡಿಲ್ಲ ಸರಕಾರ ಕೂಡಲೇ ಆದೇಶ ಮಾಡಿ ಹಣ ಬಿಡುಗಡೆ ಮಾಡಬೇಕು, ಅಕ್ಷರ ದಾಸೋಹ ಮಾರ್ಗಸೂಚಿಯಲ್ಲಿ ನಾಲ್ಕು ಗಂಟೆ ಕೆಲಸ ಮಾತ್ರವಿದೆ, ಆದರೆ ದಿನ ನಿತ್ಯ ಆರು ಗಂಟೆಗಳ ಕೆಲಸ ಮಾಡುತ್ತಿದ್ದೇವೆ, ಆದ್ದರಿಂದ ಮಾರ್ಗದರ್ಶಿ ಕೈಪಿಡಿಯಲ್ಲಿ 6:00 ಕೆಲಸ ಎಂದು ತಿದ್ದುಪಡಿ ಮಾಡಬೇಕು.
60 ವರ್ಷ ವಯಸ್ಸಾಗಿದೆ ಎಂದು ನಿವೃತ್ತಿಯ ಹೆಸರಿನಲ್ಲಿ ಏನು ಪರಿಹಾರ ಕೊಡದೆ ಸುಮಾರು ನೌಕರರನ್ನು ಕೆಲಸದಿಂದ ಕೈಬಿಟ್ಟಿದ್ದಾರೆ, ನಿವೃತ್ತಿ ಹೊಂದಿರುವ ಮತ್ತು ಹೊಂದುತ್ತಿರುವ ನೌಕರರಿಗೆ ಒಂದು ಲಕ್ಷ ಪರಿಹಾರ ನೀಡಬೇಕು ಮತ್ತು ಜಂಟಿ ಖಾತೆ ಜವಾಬ್ದಾರಿಯನ್ನು ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮುಖ್ಯ ಅಡುಗೆಯವರು ನಿರ್ವಹಿಸಿಕೊಂಡು ಬರುತಿದ್ದರು ಆದರೆ ಈ ಜವಾಬ್ದಾರಿಯನ್ನು ಮುಖ್ಯ ಅಡುಗೆ ಅವರಿಂದ ಎಸ್. ಡಿ. ಎಂ. ಸಿ ಸಮಿತಿಯ ಅಧ್ಯಕ್ಷರಿಗೆ ವರ್ಗಾವಣೆ ಮಾಡಿ ಮುಖ್ಯ ಅಡುಗೆ ನೌಕರರಿಗೆ ಇರುವ ಹಕ್ಕನ್ನು ಕಿತ್ತುಕೊಂಡಿದ್ದಾರೆ.
ಈ ಹಿಂದೆ ಇರುವ ಹಾಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಮತ್ತು ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.
ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು ಮತ್ತು ಅಡುಗೆ ನೌಕರರನ್ನು ಮಾರ್ಚ್ 31ಕ್ಕೆ ಅಧಿಕೃತವಾಗಿ ಇಲಾಖೆಯ ಆದೇಶದಂತೆ ಬಿಡುಗಡೆ ಮಾಡುತ್ತಾರೆ, ಆದರೆ ಏಪ್ರಿಲ್ 10 ರ ವರೆಗೆ ಕೆಲಸ ಮಾಡಿಸುತ್ತಾರೆ ಇವರ ಕರ್ತವ್ಯ ನಿರ್ವಹಿಸುವ ಹಾಗೆ ಮಾರ್ಚ್ 31ರ ಬದಲು ಏಪ್ರಿಲ್ 10 ಎಂದು ಆದೇಶಮಾಡಬೇಕು ಹಾಗೂ ಬಿಸಿಯೂಟ ಯೋಜನೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ನೀಡಬಾರದು.
ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಬೇಕು ಹಾಗೂ ಬಿಸಿಯೂಟ ನೌಕರರನ್ನು ‘ಡಿ’ ಗ್ರೂಪ್ ನೌಕರರಾಗಿ ಪರಿಗಣಿಸಬೇಕು ಎಂದು ತಿಳಿಸುತ್ತಾ ಮಾಧ್ಯಮ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಮ್ಮ, ಖಜಾಂಚಿ ಮಂಜುಳಾ. ಸಿ.ಐ.ಟಿ.ಯು ತಾ ಕಾರ್ಯದರ್ಶಿ ಸುಕನ್ಯ ಹಾಗೂ ಅಕ್ಷರ ದಾಸೋಹ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy