ತುರುವೇಕೆರೆ : ಬೆಳಗಾವಿ ಜಿಲ್ಲೆ ಚಿಕ್ಕೋಡಿ ಹೀರೆಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ್ ಜೈನ ಮುನಿಗಳ ಬರ್ಬರ ಹತ್ಯೆ ಖಂಡಿಸಿ ತಾಲೂಕು ಜೈನ ಸಮಾಜದಿಂದ, ಜೈನ ಮುನಿಗಳಿಗೆ ಹಾಗೂ ಸಂತರಿಗೆ ರಕ್ಷಣೆ ಕೋರಿ ತಹಶೀಲ್ದಾರ್ ರವರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಯಸಂದ್ರ ಹಾಗೂ ತಂಡಗ ಗ್ರಾಮಗಳಲ್ಲಿನ ಜೈನ ಸಮಾಜದ ಬಂಧುಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನ್ಯಾಯ ದೊರಕಿಸಿ ಕೊಡುವಂತೆ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ. ದಂಡಾಧಿಕಾರಿಗಳವರ ಕಚೇರಿಯ ಬಳಿ ಆಗಮಿಸಿದರು.
ಈ ವೇಳೆ ಮಾತನಾಡಿದ ಮಾಯಸಂದ್ರ ಜೈನ ಸಮಾಜದ ಮುಖಂಡ ವಿಪುಲ್ ಜೈನ್, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿ ಜೈನ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದ ಜೈನ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರವರನ್ನು ಬರ್ಬರವಾಗಿ ಹತ್ಯೆ ಮಾಡಿ ಅಂಗಾಂಗಗಳನ್ನು ತುಂಡರಿಸಿರುವುದು ಜೈನ ಸಮಾಜಕ್ಕೆ ಆಘಾತ ಉಂಟು ಮಾಡಿದೆ.
ಜೈನ ಧರ್ಮದ ಮುನಿಗಳು ಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪಾಲಕರು ಇವರ ಮೇಲೆ ಇಂತಹ ಘಟನೆ ನಡೆದಿರುವುದು ದುರಂತ ಇಂತಹ ಪ್ರಕರಣಗಳು ಮರು ಕಳಿಸಿದಂತೆ ರಕ್ಷಣೆ ನೀಡಬೇಕು ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ನಮ್ಮ ಧರ್ಮದ ಬಂಧುಗಳಿಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಯಸಂದ್ರ ಹಾಗೂ ತಂಡದ ಜೈನ ಸಮಾಜದ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾಯಸಂದ್ರ ಗ್ರಾಮದ ಜೈನ ಸಮಾಜದ ಅಧ್ಯಕ್ಷ ಚಂದ್ರಪ್ರಭು ಮಹಿಳಾ ಅಧ್ಯಕ್ಷ ಸುಮತಿ ಪ್ರಕಾಶ್ ಹಾಗೂ ತಂಡಗ ಜೈನ ಸಮಾಜದ ಅಧ್ಯಕ್ಷ ಚಂದ್ರ ತುರುವೇಕೆರೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಹೀರೆಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ್ ಜೈ ನಮೋನಿಗಳ ಬರ್ಬರ ಹತ್ಯೆ ಖಂಡಿಸಿ ತಾಲೂಕು ಜೈನ ಸಮಾಜದಿಂದ ಜೈನ ಮುನಿಗಳಿಗೆ ಹಾಗೂ ಸಂತರಿಗೆ ರಕ್ಷಣೆ ಕೋರಿ ತಹಸಿಲ್ದಾರ್ ರವರ ಅನುಪಸ್ಥಿತಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಮಾಯಸಂದ್ರ ಹಾಗೂ ತಂಡಗ ಗ್ರಾಮಗಳಲ್ಲಿನ ಜೈನ ಸಮಾಜದ ಬಂಧುಗಳು ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನ್ಯಾಯ ದೊರಕಿಸಿ ಕೊಡುವಂತೆ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಜೈನ ಮುನಿಗಳಿಗೆ ರಕ್ಷಣೆ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ, ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ದಂಡಾಧಿಕಾರಿಗಳವರ ಕಚೇರಿಯ ಬಳಿ ಆಗಮಿಸಿದರು.
ನಂತರ ಮಾತನಾಡಿದ ಜೈನ ಸಮಾಜದ ಮುಖಂಡ ವಿಪುಲ್ ಜೈನ್ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತದಲ್ಲಿ ಜೈನ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿದ್ದ ಜೈನ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರವರನ್ನು ಬರ್ಬರವಾಗಿ ಹತ್ಯೆಗ ಇದು ಅಂಗಾಂಗಗಳನ್ನು ತುಂಡರಿಸಿರುವುದು ಜೈನ ಸಮಾಜಕ್ಕೆ ಆಘಾತ ಉಂಟು ಮಾಡಿದೆ ಜೈನ ಧರ್ಮದ ಮುನಿಗಳು ಹಿಂಸೆ ಮತ್ತು ತ್ಯಾಗದ ಪ್ರತಿಪಾದಕರು ಹಾಗೂ ಶಾಂತಿ ಪಾಲಕರು ಇವರ ಮೇಲೆ ಇಂತಹ ಘಟನೆ ನಡೆದಿರುವುದು ದುರಂತ ಇಂತಹ ಪ್ರಕರಣಗಳು ಮರಿಕಳಿಸಿದಂತೆ ರಕ್ಷಣೆ ನೀಡಬೇಕು ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಅವರಿಗೆ ಭದ್ರತೆ ನೀಡಬೇಕೆಂದು ಒತ್ತಾಯಿಸಿದರು.
ಮನೆಯಲ್ಲಿ ಮಾಯಸಂದ್ರ ಹಾಗೂ ತಂಡದ ಜೈನ ಸಮಾಜದ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಜೈನ ಸಮಾಜದ ಮಾಯಸಂದ್ರ ಗ್ರಾಮದ ಅಧ್ಯಕ್ಷ ಚಂದ್ರಪ್ರಭು ಮಹಿಳಾ ಅಧ್ಯಕ್ಷ ಸುಮತಿ ಪ್ರಕಾಶ್ ಹಾಗೂ ತಂಡದ ಜೈನ ಸಮಾಜದ ಅಧ್ಯಕ್ಷ ಚಂದ್ರ ಕೀರ್ತಿ ಹಾಗೂ ಮಹಿಳಾ ಅಧ್ಯಕ್ಷ ಟಿಪಿ ಪ್ರಮಾಣ ಸೇರಿದಂತೆ ಜೈನ ಸಮಾಜದವರು ಭಾಗವಹಿಸಿದ್ದರು. ಸಮಾಜದವರು ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy