ತುಮಕೂರು: ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಪಿಎಸ್ ಐ ಹಗರಣ ಬಗ್ಗೆ ಕಾನೂನು ತಜ್ಞ ರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಎಂದು ಗೃಹ ಸಚಿವ ಡಾ ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಶಕ್ತಿ ಯೋಜನೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಸಾಧಕ ಬಾಧಕಗಳನ್ನು ಚರ್ಚೆ ಮಾಡಿಯೇ ಯೋಜನೆ ಜಾರಿಗೆ ಮಾಡಲಾಗಿದೆ. ಯಾವ ರೀತಿ ಖರ್ಚು ಭರಿಸಬೇಕು ಎಂಬುವುದನ್ನು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದಿವಿ ಎಂದರು.
ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ ಕಾರ್ಯಕ್ರಮ ಗಳು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ ಉಳಿತಾಯ ಮಾಡಿ, ಆ ಹಣದಿಂದ ಈ ಯೋಜನೆಗೆ ಖರ್ಚು ಮಾಡಿತಿವಿ ಎಂದರು.
ಜನತೆಗೆ ಯಾವುದೇ ಅನುಮಾನ ಬೇಡ. ಮಹಿಳೆಯರಿಗೆ ಸಬಲಿಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ಮಾಡಿದಿವಿ ಎಂದರು.
ಸ್ತ್ರೀ ಸಂಘ ಮಾಡಿದಿವಿ ಅದು ಇಂದು ಕೂಡ ಮುಂದುವರೆದಿದೆ. ಉಚಿತ ಪ್ರಯಾಣ ಮಾಡಲು ಸವಲತ್ತ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಕಡೆ ಇದು ಆರಂಭವಾಗಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA