nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025

    ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ

    June 16, 2025

    ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

    June 16, 2025
    Facebook Twitter Instagram
    ಟ್ರೆಂಡಿಂಗ್
    • ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ
    • ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ
    • ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ
    • ನೀರಿನ ವಿಚಾರದಲ್ಲಿ ಸರ್ಕಾರ ರಾಜಕಾರಣ ಮಾಡಬಾರದು: ತುಮಕೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ
    • ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!
    • ಸೇತುವೆ ಕುಸಿದು 6 ಮಂದಿ ಪ್ರವಾಸಿಗರು ಸಾವು
    • ಸೋಲಾರ್ ವಾಟರ್ ಹೀಟರ್ ಖರೀದಿ : ಟೆಂಡರ್ ಆಹ್ವಾನ
    • ಪಾಲಿಕೆ : ಐಇಸಿ ಚಟುವಟಿಕೆಗಾಗಿ ಎಸ್‌ ಹೆಚ್‌ ಜಿ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಬಿಬಿಎಂಪಿಯಿಂದ ಗಂಭೀರ ಲೋಪ
    ರಾಜ್ಯ ಸುದ್ದಿ December 27, 2022

    ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಬಿಬಿಎಂಪಿಯಿಂದ ಗಂಭೀರ ಲೋಪ

    By adminDecember 27, 2022No Comments2 Mins Read
    vdyarthi

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಾರ್ಷಿಕ ಪರಿಶೋಧನಾ ವರದಿಯಲ್ಲಿ ಗಮನಕ್ಕೆ ಬಂದಿರುವಂತೆ ಬಿಬಿಎಂಪಿಯ ಅಧಿಕಾರಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಸಿದ್ಧವಾಗುತ್ತಿರುವ ಪದವಿಪೂರ್ವ (ಪಿಯು) ವಿದ್ಯಾರ್ಥಿಗಳಿಗೆ ಹಾಗೂ ಟ್ಯಾಲಿ ಅಕೌಂಟಿಂಗ್ ಸಾಫ್ಟ್ ವೇರ್ ಅನ್ನು ಕಲಿತು ತಮ್ಮ ಅಕೌಂಟೆನ್ಸಿ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ಉತ್ಸುಕರಾಗಿದ್ದಂತಹ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ತರಬೇತಿ ಏಜೆನ್ಸಿಯೊಂದನ್ನು ಆಯ್ಕೆ ಮಾಡುವಲ್ಲಿ ಅಗತ್ಯಕ್ಕಿಂತ ಹೆಚ್ಚು ವೇಗವನ್ನು ತೋರ್ಪಡಿಸಿರುವ ಸಂಗತಿ ಬಹಿರಂಗಗೊಂಡಿದೆ.
    ಈ ಪರಿಶೊಧನಾ ವರದಿಯಲ್ಲಿ ಬಿಬಿಎಂಪಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಿಬಿಎಂಪಿ ಆಯ್ಕೆ ಮಾಡಿರುವ ಸೇವಾ ಏಜೆನ್ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಗಂಭೀರ ಲೋಪವೊಂದು ಬಹಿರಂಗಗೊಂಡಿದೆ.

    ಸಿಇಟಿ ಹಾಗೂ ಅಕೌಂಟಿಂಗ್ ಸಾಫ್ಟ್ ವೇರ್ ಟ್ಯಾಲಿಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಬಂಧಪಟ್ಟ ವಿಷಯದಲ್ಲಿ ಪರಿಣಿತಿಯನ್ನು ಹೊಂದಿರುವ ಸಂಸ್ಥೆಗಳನ್ನು ಗುರುತಿಸಿ ಆಯ್ಕೆ ಮಾಡುವ ಬದಲಿಗೆ, ಬಿಬಿಎಂಪಿಯು ಪೇಪರ್ ಪ್ಲೇಟುಗಳನ್ನು ತಯಾರಿಸಿ ವಿತರಣೆ ಮಾಡುವ ಎಸ್‌ ಆರ್ ಇಂಡಸ್ಟ್ರಿಸ್‌ಗೆ ಆ ಜವಾಬ್ದಾರಿಯನ್ನು ವಹಿಸಿರುವ ಸಂಗತಿ ಪರಿಶೋಧನಾ ವರದಿಯಲ್ಲಿ (ಪುಟ ಸಂಖ್ಯೆ ೧೯೪ ಹಾಗೂ ೧೯೫) ಕಂಡು ಬಂದಿದೆ. ಬಿಬಿಎಂಪಿಯು ೨೦೧೮ರಲ್ಲಿ ಸಿಇಟಿಗೆ ಸಿದ್ಧವಾಗುತ್ತಿರುವ 142 ವಿದ್ಯಾರ್ಥಿಗಳು ಹಾಗೂ ಟ್ಯಾಲಿ ತರಬೇತಿ ಪಡೆಯುವ 2,050 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಗುರುತಿಸಿ, ಆಯ್ಕೆ ಮಾಡಿರುವ ಈ ಎಸ್‌ ಆರ್ ಇಂಡಸ್ಟ್ರೀಸ್‌ ಗೆ ರೂ.೧,೮೪,೦೦,೦೦೦ ಪಾವತಿಸಿದೆ. ನಗರದಲ್ಲಿ ಬಿಬಿಎಂಪಿ ನಿರ್ವಹಿಸುತ್ತಿರುವ ೧೫ ಪಿಯು ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ೨೦೧೮ರಲ್ಲಿ ಒಟ್ಟು ೪,೪೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆ ಪೈಕಿ ೧೪೨ ವಿದ್ಯಾರ್ಥಿಗಳು ಸಿಇಟಿ ತರಬೇತಿ ತರಗತಿಗಳಿಗೆ ಹಾಜರಾಗಲು ಆರ್ಹರಾಗಿದ್ದರು ಹಾಗೂ ೨,೦೫೦ ವಿದ್ಯಾರ್ಥಿಗಳು ಟ್ಯಾಲಿ ಸಾಫ್ಟ್ ವೇರ್ ಕಲಿಯಲು ಅರ್ಹತೆ ಪಡೆದುಕೊಂಡಿದ್ದರು.


    Provided by

    ಜೊತೆಗೆ ಈ ಆಡಿಟ್‌ ನಲ್ಲಿ ಎಸ್‌ಆರ್ ಇಂಡಸ್ಟ್ರೀಸ್ ತರಬೇತಿ ನೀಡಲು ಗುತ್ತಿಗೆ ಪಡೆಯುವಾಗ, ಪಾಲಿಕೆಗೆ ಸಲ್ಲಿಸಿದ್ದಂತಹ ಅರ್ಜಿಯ ಜೊತೆಗೆ ಪರವಾನಗಿ ಪ್ರತಿಯನ್ನೂ ಲಗತ್ತಿಸಿಲ್ಲ. ಬಿಬಿಎಂಪಿಯು ಡಿಸೆಂಬರ್ ೧೧, ೨೦೧೮ರಲ್ಲಿ ಆದೇಶವೊಂದನ್ನು ಹೊರಡಿಸಿದ್ದು, ಸಿಇಟಿ ಹಾಗೂ ಟ್ಯಾಲಿ ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳ ಆಯ್ಕೆಯ ವಿಧಾನವನ್ನೂ ಹಾಗೂ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಕಲಿಯುತ್ತಿರುವ ಪಿಯು ಕಾಲೇಜುಗಳ ಹೆಸರಗಳನ್ನೂ ಸಹ ನಮೂದಿಸಿಲ್ಲ. ಈ ಸಂಬಂಧ ಪರಿಶೋಧನಾ ಅಧಿಕಾರಿಗಳು ಬಿಬಿಎಂಪಿ ಪ್ರಾಧಿಕಾರಿಗಳಿಗೆ ಡಿಸೆಂಬರ್ ೬, ೨೦೧೯ರಂದು ಒಂದು ಪತ್ರವನ್ನೂ ಬರೆದಿದ್ದು, ಆದರೆ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ, ಎಂದೂ ಬಿಬಿಎಂಪಿಯ ಮುಖ್ಯ ಪರಿಶೋಧನಾ ಅಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.

    ಈ ವರದಿಯ ಪ್ರಕಾರ ಬಿಬಿಎಂಪಿ ಎಸ್.ಆರ್. ಇಂಡಸ್ಟ್ರೀಸ್‌ ಗೆ, ಸಿಇಟಿ ತರಬೇತಿಗೆ ಹಾಜರಾದ ಒಟ್ಟು ೧೪೨ ವಿದ್ಯಾರ್ಥಿಗಳಿಗೆ ತಲಾ ರೂ.೧೦,೪೭೫ರಂತೆ ರೂ.೧೦,೪೭೫ ಅನ್ನು ಟ್ಯೂಷನ್ ಶುಲ್ಕವನ್ನು ಪಾವತಿಸಿದೆ. ಅದೇ ರೀತಿ ಟ್ಯಾಲಿ ಸಾಫ್ಟ್ ವೇರ್ ತರಗತಿಗಳಿಗೆ ಹಾಜರಾದ ೨,೦೫೦ ವಿದ್ಯಾರ್ಥಿಗಳಿಗೆ ತಲಾ ರೂ.೮,೩೦೦ರಂತೆ ಟ್ಯೂಷನ್ ಶುಲ್ಕವನ್ನು ಅದೇ ಕಂಪನಿಗೆ ಪಾವತಿಸಿದೆ.

    ಆದರೆ ತರಬೇತಿಯ ಅವಧಿ, ವಿದ್ಯಾರ್ಥಿಗಳ ಹಾಜರಾತಿ ಹಾಗೂ ವಿದ್ಯಾರ್ಥಿಗಳಿಗೆ ವಿತರಿಸಿರುವ ಪ್ರಮಾಣಪತ್ರಗಳ ವಿವರಗಳು ಇವ್ಯಾವೂ ಲಭ್ಯವಿಲ್ಲ ಎಂದು ಆಡಿಟ್ ವರದಿ ಬಹಿರಂಗಗೊಳಿಸಿದೆ. ಸಿಇಟಿ ಇಸಿಟಿ ಹಾಗೂ ಟ್ಯಾಲಿ ಸಾಫ್ಟ್ ವೇರ್ ತರಬೇತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತರಬೇತಿ ಒದಗಿಸಲು ಬಿಡ್‌ಗಳನ್ನು ಆಹ್ವಾನಿಸುವ ಟೆಂಡರ್ ಉಲ್ಲಂಘನೆ ಆಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. “ಟೆಂಡರ್‌ ನಲ್ಲಿ ತರಬೇತಿ ತರಗತಿಗಳ ಅವಧಿಯ ವಿವರಗಳಿಲ್ಲ. ಟೆಂಡರ್ ಪ್ರಕ್ರಿಯೇಯೇ ಕಾನೂನುಬಾಹಿರ,” ಎಂದು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.

    ಸುದ್ದಿ ಮೂಲ: ಬೆಂಗಳೂರ್ ಮಿರರ್


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಭೀಕರ ಅಪಘಾತ: ಇಬ್ಬರು ಮಕ್ಕಳ ಸಹಿತ ನಾಲ್ವರು ಸಾವು

    June 13, 2025

    ಮರುಸಮೀಕ್ಷೆಯಿಂದ ಜಾತಿ ಗಣತಿ ಗೊಂದಲಗಳು ನಿವಾರಣೆ: ಸಚಿವ ಸತೀಶ್ ಜಾರಕಿಹೊಳಿ

    June 13, 2025

    ಕಾಲ್ತುಳಿತ ಕೇಸ್: ಜೂನ್ 13ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

    June 10, 2025
    Our Picks

    ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತರ ಪೈಕಿ 18 ಮಂದಿಯ ಗುರುತು ಪತ್ತೆಯಾಗಿಲ್ಲ!

    June 16, 2025

    ಸೇತುವೆ ಕುಸಿದು 6 ಮಂದಿ ಪ್ರವಾಸಿಗರು ಸಾವು

    June 16, 2025

    ಪತನಗೊಂಡ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು: ಅಮಿತ್ ಶಾ

    June 13, 2025

    ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತ: ಹಲವರ ಸಾವು ಶಂಕೆ

    June 12, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಪರಿಸರ ದಿನಾಚರಣೆ: ಕನ್ನಿಕಾ ವಿದ್ಯಾಪೀಠದಿಂದ ಬೀಜದ ಉಂಡೆಗಳ ವಿತರಣೆಯಿಂದ ಸಾರ್ಥಕ ಆಚರಣೆ

    June 16, 2025

    ಕೊರಟಗೆರೆ: ತಾಲೂಕಿನ ದೇವರಹಳ್ಳಿ ಬಳಿ ಇರುವ ಮುಕುಂದರಾಯನ ಬೆಟ್ಟದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಅಂಗವಾಗಿ ಬೀಜದ…

    ಆಗಸ್ಟ್ 1 ರಿಂದ ಆಟೋ ದಾಖಲಾತಿಗಳು ಕಡ್ಡಾಯ: ಸಿ.ಐ.ಸುರೇಶ್ ಖಡಕ್ ಎಚ್ಚರಿಕೆ

    June 16, 2025

    ಎತ್ತಿನಹೊಳೆ ಯೋಜನೆಯ ಭೂಸ್ವಾಧೀನಕ್ಕೆ ವೇಗ, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ

    June 16, 2025

    ನೀರಿನ ವಿಚಾರದಲ್ಲಿ ಸರ್ಕಾರ ರಾಜಕಾರಣ ಮಾಡಬಾರದು: ತುಮಕೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ

    June 16, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.