nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ

    February 20, 2026

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026
    Facebook Twitter Instagram
    ಟ್ರೆಂಡಿಂಗ್
    • ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ
    • ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!
    • ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ
    • ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ
    • ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್
    • ಸುಳ್ಳು ಅನುಭವ ಪತ್ರ ನೀಡಿದ ಆರೋಪ: 6 ಮಂದಿ ವಿರುದ್ಧ ಕೇಸ್
    • ತುಮಕೂರು: ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ
    • ಸ್ವಚ್ಛತೆಯ ರಾಯಭಾರಿಗಳಾದ ಬೊಮ್ಮಲದೇವೀಪುರ ಪಂಚಾಯಿತಿಯ ಮಹಿಳಾ ಪೌರ ಕಾರ್ಮಿಕರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಂಕಹಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಭೂಮಿ ಒತ್ತುವರಿ ತೆರವು: ಕಠಿಣ ಕ್ರಮಕ್ಕೆ ತಹಶೀಲ್ದಾರ್ ಸೂಚನೆ
    ಜಿಲ್ಲಾ ಸುದ್ದಿ May 17, 2025

    ಶಂಕಹಳ್ಳಿ ಗ್ರಾಮದ ಸಾರ್ವಜನಿಕ ಸ್ಮಶಾನ ಭೂಮಿ ಒತ್ತುವರಿ ತೆರವು: ಕಠಿಣ ಕ್ರಮಕ್ಕೆ ತಹಶೀಲ್ದಾರ್ ಸೂಚನೆ

    By adminMay 17, 2025No Comments3 Mins Read
    shankrahalli

    ಸರಗೂರು:  ಶಂಕಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಒತ್ತುವರಿಯಾಗಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಶಾಸಕರು ಆದೇಶದಂತೆ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸುರ್ಪದಿಗೆ ನೀಡಲಾಗಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.

    ಶಂಕಹಳ್ಳಿ ಗ್ರಾಮಸ್ಥರಿಗೆ ಮೀಸಲಿಟ್ಟದ ಸ್ಮಶಾನ ಭೂಮಿಯನ್ನು ಅಕ್ರಮಿಕೊಂಡಿದ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರಿಗೆ ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಶಂಕಹಳ್ಳಿ ಗ್ರಾಮದ ಎಲ್ಲಾ ಸಮುದಾಯದ ಮಾಡಿದ್ದ ಮನವಿಗೆ ತಾಲೂಕು ಆಡಳಿತ ಅಧಿಕಾರಿಗಳು ಸ್ಪಂದಿಸಿ ಶುಕ್ರವಾರದಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಶಂಕಹಳ್ಳಿ ರುದ್ರಭೂಮಿ ನಾಮಫಲಕವನ್ನು ತಹಶೀಲ್ದಾರ್ ಮೋಹನಕುಮಾರಿ ಸಮ್ಮುಖದಲ್ಲಿ ನಡೆಸಿದರು.


    Provided by
    Provided by

    ಅ ವ್ಯಕ್ತಿಯಿಂದ ಈ ಜಾಗದ ದಾಖಲೆಗಳು ತಂದರೆ ದಾಖಲೆಗಳನ್ನು ಪರಿಶೀಲಿಸಲಾಗುವುದು. ಆ ವ್ಯಕ್ತಿಗೆ ನಮ್ಮ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಕರೆ ಮಾಡಿ ಜಮೀನು ಹತ್ತಿರಕ್ಕೆ ಬರಬೇಕು ಎಂದು ಹೇಳಿದರೂ, ಆ ವ್ಯಕ್ತಿ ಬರಲಿಲ್ಲ. ಇದರಿಂದಾಗಿ ಆ ವ್ಯಕ್ತಿ ಸುಳ್ಳು ದಾಖಲೆಗಳನ್ನು ಮಾಡಿಕೊಂಡು ಈ ಸ್ಮಶಾನ ಭೂಮಿಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ. ಶಂಕಹಳ್ಳಿ ಗ್ರಾಮದ  ಸ್ಮಶಾನ ಭೂಮಿಯನ್ನು ಹತ್ತಿರ ಬಂದು ಜನರಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆ ಕೊಡಲು ಮುಂದೆ ಬಂದರೆ ಕಾನೂನು ಪ್ರಕಾರವಾಗಿ ಅವನ ಮೇಲೆ ದೂರು ದಾಖಲಾಗಿ ಮಾಡಿ ಎಂದು ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸ್ಮಶಾನ ಭೂಮಿಯನ್ನು ನಿಮ್ಮ ವಶಕ್ಕೆ ಪಡೆದುಕೊಂಡು ಸ್ಮಶಾನ ಜಾಗ ಸುತ್ತ ತಂತಿ ಬೇಲಿಯನ್ನು ಅಳವಡಿಸಿ ಹಾಗೂ ಅ ವ್ಯಕ್ತಿ ತೊಂದರೆ ನೀಡುತ್ತಿರುವ ನಿಮ್ಮ ಗಮನಕ್ಕೆ ಬಂದರೆ ನೀವೇ ಎಫ್ ಐಆರ್ ದಾಖಲು ಮಾಡಿ ಎಂದು ಸೂಚನೆ ನೀಡಿದರು.

    ಶಂಕಹಳ್ಳಿ ಗ್ರಾಮದ ಸರ್ವೆ ನಂಬರ್ 56 ರೈ ಜಮೀನು ಆರ್ಟಿಸಿ ದಾಖಲೆಯಂತೆ ಗುಂಡುತೋಪು ಜಮೀನಾಗಿದ್ದು, ಆಕಾರ್ ಬಂದ್ ದಾಖಲೆಯಂತೆ 2.05 ಎಕರೆ ಜಮೀನಿರುತ್ತದೆ. ಸದರಿ ಜಮೀನು ಪೈಕಿ 1 ಎಕರೆ ಜಮೀನನ್ನು ಶಂಕಹಳ್ಳಿ ಗ್ರಾಮದ ಎಲ್ಲಾ ಗ್ರಾಮಸ್ಥರಿಗೆ ಸ್ಮಶಾನವನ್ನು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದರು.

    ಶಂಕಹಳ್ಳಿ ಗ್ರಾಮದಲ್ಲಿ 2011 ರ ಜನಗಣತಿಯಂತೆ ಒಟ್ಟು ಜನಸಂಖ್ಯೆಯು 544 ಆಗಿದ್ದು.225 ಜಾನುವಾರುಗಳಿರುತ್ತದೆ.ಜನಸಂಖ್ಯೆಗನುಗುಣವಾಗಿ ಸ್ಮಶಾನ ಕಲ್ಲಿಸಿಕೊಡುವ ಉದ್ದೇಶಕ್ಕಾಗಿ ಈ ಒಂದು ಎಕರೆ ಭೂಮಿಯನ್ನು ತೆರವುಗೊಳಿಸಲಾಯಿತು ಎಂದರು.

    ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ನಂಜಪ್ಪ, ಗ್ರಾಮದಲ್ಲಿ 30ರಿಂದ 40 ವರ್ಷಗಳಿಂದ ಇದೇ ಭೂಮಿಯಲ್ಲಿ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ಸಣ್ಣಕೂಸಯ್ಯ , ಮಹಾದೇವಯ್ಯ, ರಾಜೇಶ್ ಇತರರು ಈ ಭೂಮಿ ನಮಗೆ ಸೇರಿದ್ದು ಎಂದುಕೊಂಡು ಸ್ಮಶಾನ ಭೂಮಿಯನ್ನು ಅಕ್ರಮಿಕೊಂಡು ಸಂಸ್ಕಾರ ಮಾಡಲು ಬಿಡದೆ. ದಬ್ಬಾಳಿಕೆ ನಡೆಸಿಕೊಂಡು ಬರುತ್ತಿದ್ದರು. ಆದ್ದರಿಂದ ಎಲ್ಲಾ ಸಮುದಾಯದ ಮುಖಂಡರು ಸೇರಿಕೊಂಡು ಸರಗೂರು ತಾಲೂಕಿನ ತಹಶೀಲ್ದಾರ್ ರವರಿಗೆ ಸುಮಾರು ವರ್ಷಗಳಿಂದ ಮನವಿ ಮಾಡಿಕೊಂಡು, 2023 ಸಾಲಿನಲ್ಲಿ ಶಂಕಹಳ್ಳಿ ರುದ್ರಭೂಮಿ ಎಂದು ಘೋಷಣೆ ಮಾಡಲಾಗಿತ್ತು. ಸರ್ಕಾರದಿಂದ ಒಂದು ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ಭೂ ಮಾಲೀಕ ವ್ಯಕ್ತಿ ಎಂಬುವರು ಶಂಕಹಳ್ಳಿ ಗ್ರಾಮಸ್ಥರ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಮಂಜೂರಾಗಿದ್ದ ಸ್ಮಶಾನ ಜಾಗದಲ್ಲಿ ಇದ್ದರಿಂದ ತಾಲೂಕು ಆಡಳಿತಕ್ಕೆ ಮನವಿ ಮಾಡಿ ಶವ ಸಂಸ್ಕಾರ ಮಾಡಲು ಅವಕಾಶ ನೀಡಿದೆ ತೊಂದರೆ ನೀಡುತ್ತಿದ್ದರು. ವಿಧಿಯಿಲ್ಲದೆ ಭಯಭೀತಿಯಿಂದ  ಗ್ರಾಮಸ್ಥರು ಸ್ಮಶಾನ ಭೂಮಿಯ ಪಕ್ಕದಲ್ಲಿ ಕಬಿನಿ ಜಲಾಶಯದ ನದಿಯ ದಡದಲ್ಲಿ ಇರುವ ಸಂಸ್ಕಾರ ಮಾಡುತ್ತಿದ್ದರು. ಇನ್ನೂ ಕೆಲವರು ತಮ್ಮ ತಮ್ಮ ಜಮೀನಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಸ್ಥಿತಿ ಇತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಕೋರಲಾಗಿತ್ತು. ಅದರಂತೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಜಿಲ್ಲಾಧಿಕಾರಿ ರವರ ಆದೇಶ ಮೇರೆಗೆ ತಹಶೀಲ್ದಾರ್ ಮೋಹನಕುಮಾರಿ ಶಂಕಹಳ್ಳಿ ಗ್ರಾಮದ ಸ್ಮಶಾನ ಭೂಮಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಒಂದು ಎಕರೆ ಭೂಮಿಯನ್ನು ತೆರವುಗೊಳಿಸಿ ಕೊಟ್ಟರು ಎಂದರು.

    ಸ್ಥಳಕ್ಕೆ ಕಂದಾಯ ಇಲಾಖೆ ತಾಲೂಕು ಪಂಚಾಯಿತಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನಂತರ ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸರ್ಕಾರದಿಂದ ಶಂಕಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಸ್ಮಶಾನ ಭೂಮಿಯನ್ನು ಆದೇಶ ಹೊರಡಿಸಲಾಗಿದೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ವ್ಯಕ್ತಿ ಭೂಮಿಯನ್ನು ಅಕ್ರಮಿಕೊಂಡು ನನ್ನದೆ ಎಂದು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ದೂರು ಬಂದಿದೆ. ಅದರಂತೆ ನಮ್ಮ ಇಲಾಖೆ ಅಧಿಕಾರಿಗಳನ್ನು ಸ್ಮಶಾನ ಭೂಮಿಯನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.ಈ ಸ್ಮಶಾನ ಜಾಗ ಶಂಕಹಳ್ಳಿ ಗ್ರಾಮಕ್ಕೆ ಸೇರಿದ ಎಂದು ಗೊತ್ತಾದ ಮೇಲೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಸ್ಮಶಾನ ಜಾಗವನ್ನು ನೀಡಲಾಯಿತು.

    ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರೀತಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್, ಪಿಎಸ್ ಐ ಕಿರಣ್, ಆರ್ ಐ ರವಿಚಂದ್ರನ್, ವಿಎ ಚಂದ್ರಶೇಖರ, ಪಿಡಿಒ ಯೋಗೇಂದ್ರ, ಯಜಮಾನರು ಗೌಡಿಕೆ ರಾಜಪ್ಪ, ಶಿವನಂಜಪ್ಪ, ಗಿರಿನಾಯಕ, ಗ್ರಾಪಂ ಸದಸ್ಯ ಎಸ್ ಟಿ ವರದನಾಯಕ, ಮಹೇಶ್ವರಪ್ಪ, ಸಣ್ಣತಿಮ್ಮನಾಯಕ, ನರಸಿಂಹನಾಯಕ, ಶೇಷ ನಾಯಕ, ಗೋಪಾಲ್ ಶೆಟ್ಟರು, ಸಿ.ತಿಮ್ಮನಾಯಕ, ಎಸ್ ಎಸ್ ಬೆಟ್ಟನಾಯಕ, ಗಿರಿನಾಯಕ, ಮಾಜಿ ಯಜಮಾನ ತಿಮ್ಮ ನಾಯಕ ಸರ್ವೆ ನಾಗರಾಜು ಇನ್ನೂ ಮುಖಂಡರು ಸೇರಿದಂತೆ ಎಲ್ಲಾ ಸಮುದಾಯದ ಯಜಮಾನರು ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ

    February 20, 2026

    ಮಕ್ಕಳ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಹಿರಿದು: ಡಾ.ಕೆ.ಟಿ.ತಿಪ್ಪೇಸ್ವಾಮಿ

    February 18, 2026

    ಹೆಚ್‌ ಐವಿ ಪೀಡಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ: ಗಿರೀಶ್

    February 18, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕಾರವಾರ: ಜನನ, ಮರಣವನ್ನು 21 ದಿನಗಳ ಒಳಗೆ ನೋಂದಣಿ ಮಾಡಿ: ಅಪರ ಜಿಲ್ಲಾಧಿಕಾರಿ

    February 20, 2026

    ಕಾರವಾರ:  ಜಿಲ್ಲೆಯಲ್ಲಿ ಘಟಿಸುವ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು 21 ದಿನಗಳ ಒಳಗೆ ಕಡ್ಡಾಯವಾಗಿ ಶೇ.100 ರಷ್ಟು ನೋಂದಣಿ…

    ಯುಗಾದಿ ನಂತರ ಕರ್ನಾಟಕಕ್ಕೆ ಹೊಸ ಸಿಎಂ? ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ ಮತ್ತು ಜಾಗತಿಕ ಯುದ್ಧದ ಮುನ್ಸೂಚನೆ!

    February 19, 2026

    ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹ ಧನ ನೀಡಿ: ಸಿಎಂಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಮನವಿ

    February 19, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.