ಸರಗೂರು: ಶಂಕಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಒತ್ತುವರಿಯಾಗಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಶಾಸಕರು ಆದೇಶದಂತೆ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿ ಸುರ್ಪದಿಗೆ ನೀಡಲಾಗಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.
ಶಂಕಹಳ್ಳಿ ಗ್ರಾಮಸ್ಥರಿಗೆ ಮೀಸಲಿಟ್ಟದ ಸ್ಮಶಾನ ಭೂಮಿಯನ್ನು ಅಕ್ರಮಿಕೊಂಡಿದ ಭೂಮಿಯನ್ನು ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರಿಗೆ ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಶಂಕಹಳ್ಳಿ ಗ್ರಾಮದ ಎಲ್ಲಾ ಸಮುದಾಯದ ಮಾಡಿದ್ದ ಮನವಿಗೆ ತಾಲೂಕು ಆಡಳಿತ ಅಧಿಕಾರಿಗಳು ಸ್ಪಂದಿಸಿ ಶುಕ್ರವಾರದಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಶಂಕಹಳ್ಳಿ ರುದ್ರಭೂಮಿ ನಾಮಫಲಕವನ್ನು ತಹಶೀಲ್ದಾರ್ ಮೋಹನಕುಮಾರಿ ಸಮ್ಮುಖದಲ್ಲಿ ನಡೆಸಿದರು.
ಅ ವ್ಯಕ್ತಿಯಿಂದ ಈ ಜಾಗದ ದಾಖಲೆಗಳು ತಂದರೆ ದಾಖಲೆಗಳನ್ನು ಪರಿಶೀಲಿಸಲಾಗುವುದು. ಆ ವ್ಯಕ್ತಿಗೆ ನಮ್ಮ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಕರೆ ಮಾಡಿ ಜಮೀನು ಹತ್ತಿರಕ್ಕೆ ಬರಬೇಕು ಎಂದು ಹೇಳಿದರೂ, ಆ ವ್ಯಕ್ತಿ ಬರಲಿಲ್ಲ. ಇದರಿಂದಾಗಿ ಆ ವ್ಯಕ್ತಿ ಸುಳ್ಳು ದಾಖಲೆಗಳನ್ನು ಮಾಡಿಕೊಂಡು ಈ ಸ್ಮಶಾನ ಭೂಮಿಯನ್ನು ಆಕ್ರಮಿಸಿಕೊಳ್ಳಲು ಮುಂದಾಗಿದ್ದಾರೆ. ಶಂಕಹಳ್ಳಿ ಗ್ರಾಮದ ಸ್ಮಶಾನ ಭೂಮಿಯನ್ನು ಹತ್ತಿರ ಬಂದು ಜನರಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆ ಕೊಡಲು ಮುಂದೆ ಬಂದರೆ ಕಾನೂನು ಪ್ರಕಾರವಾಗಿ ಅವನ ಮೇಲೆ ದೂರು ದಾಖಲಾಗಿ ಮಾಡಿ ಎಂದು ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸ್ಮಶಾನ ಭೂಮಿಯನ್ನು ನಿಮ್ಮ ವಶಕ್ಕೆ ಪಡೆದುಕೊಂಡು ಸ್ಮಶಾನ ಜಾಗ ಸುತ್ತ ತಂತಿ ಬೇಲಿಯನ್ನು ಅಳವಡಿಸಿ ಹಾಗೂ ಅ ವ್ಯಕ್ತಿ ತೊಂದರೆ ನೀಡುತ್ತಿರುವ ನಿಮ್ಮ ಗಮನಕ್ಕೆ ಬಂದರೆ ನೀವೇ ಎಫ್ ಐಆರ್ ದಾಖಲು ಮಾಡಿ ಎಂದು ಸೂಚನೆ ನೀಡಿದರು.
ಶಂಕಹಳ್ಳಿ ಗ್ರಾಮದ ಸರ್ವೆ ನಂಬರ್ 56 ರೈ ಜಮೀನು ಆರ್ಟಿಸಿ ದಾಖಲೆಯಂತೆ ಗುಂಡುತೋಪು ಜಮೀನಾಗಿದ್ದು, ಆಕಾರ್ ಬಂದ್ ದಾಖಲೆಯಂತೆ 2.05 ಎಕರೆ ಜಮೀನಿರುತ್ತದೆ. ಸದರಿ ಜಮೀನು ಪೈಕಿ 1 ಎಕರೆ ಜಮೀನನ್ನು ಶಂಕಹಳ್ಳಿ ಗ್ರಾಮದ ಎಲ್ಲಾ ಗ್ರಾಮಸ್ಥರಿಗೆ ಸ್ಮಶಾನವನ್ನು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದರು.
ಶಂಕಹಳ್ಳಿ ಗ್ರಾಮದಲ್ಲಿ 2011 ರ ಜನಗಣತಿಯಂತೆ ಒಟ್ಟು ಜನಸಂಖ್ಯೆಯು 544 ಆಗಿದ್ದು.225 ಜಾನುವಾರುಗಳಿರುತ್ತದೆ.ಜನಸಂಖ್ಯೆಗನುಗುಣವಾಗಿ ಸ್ಮಶಾನ ಕಲ್ಲಿಸಿಕೊಡುವ ಉದ್ದೇಶಕ್ಕಾಗಿ ಈ ಒಂದು ಎಕರೆ ಭೂಮಿಯನ್ನು ತೆರವುಗೊಳಿಸಲಾಯಿತು ಎಂದರು.
ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ನಂಜಪ್ಪ, ಗ್ರಾಮದಲ್ಲಿ 30ರಿಂದ 40 ವರ್ಷಗಳಿಂದ ಇದೇ ಭೂಮಿಯಲ್ಲಿ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ಸಣ್ಣಕೂಸಯ್ಯ , ಮಹಾದೇವಯ್ಯ, ರಾಜೇಶ್ ಇತರರು ಈ ಭೂಮಿ ನಮಗೆ ಸೇರಿದ್ದು ಎಂದುಕೊಂಡು ಸ್ಮಶಾನ ಭೂಮಿಯನ್ನು ಅಕ್ರಮಿಕೊಂಡು ಸಂಸ್ಕಾರ ಮಾಡಲು ಬಿಡದೆ. ದಬ್ಬಾಳಿಕೆ ನಡೆಸಿಕೊಂಡು ಬರುತ್ತಿದ್ದರು. ಆದ್ದರಿಂದ ಎಲ್ಲಾ ಸಮುದಾಯದ ಮುಖಂಡರು ಸೇರಿಕೊಂಡು ಸರಗೂರು ತಾಲೂಕಿನ ತಹಶೀಲ್ದಾರ್ ರವರಿಗೆ ಸುಮಾರು ವರ್ಷಗಳಿಂದ ಮನವಿ ಮಾಡಿಕೊಂಡು, 2023 ಸಾಲಿನಲ್ಲಿ ಶಂಕಹಳ್ಳಿ ರುದ್ರಭೂಮಿ ಎಂದು ಘೋಷಣೆ ಮಾಡಲಾಗಿತ್ತು. ಸರ್ಕಾರದಿಂದ ಒಂದು ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ಭೂ ಮಾಲೀಕ ವ್ಯಕ್ತಿ ಎಂಬುವರು ಶಂಕಹಳ್ಳಿ ಗ್ರಾಮಸ್ಥರ ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಮಂಜೂರಾಗಿದ್ದ ಸ್ಮಶಾನ ಜಾಗದಲ್ಲಿ ಇದ್ದರಿಂದ ತಾಲೂಕು ಆಡಳಿತಕ್ಕೆ ಮನವಿ ಮಾಡಿ ಶವ ಸಂಸ್ಕಾರ ಮಾಡಲು ಅವಕಾಶ ನೀಡಿದೆ ತೊಂದರೆ ನೀಡುತ್ತಿದ್ದರು. ವಿಧಿಯಿಲ್ಲದೆ ಭಯಭೀತಿಯಿಂದ ಗ್ರಾಮಸ್ಥರು ಸ್ಮಶಾನ ಭೂಮಿಯ ಪಕ್ಕದಲ್ಲಿ ಕಬಿನಿ ಜಲಾಶಯದ ನದಿಯ ದಡದಲ್ಲಿ ಇರುವ ಸಂಸ್ಕಾರ ಮಾಡುತ್ತಿದ್ದರು. ಇನ್ನೂ ಕೆಲವರು ತಮ್ಮ ತಮ್ಮ ಜಮೀನಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ಜಾಗದಲ್ಲಿ ಶವ ಸಂಸ್ಕಾರ ಮಾಡುವ ಸ್ಥಿತಿ ಇತ್ತು. ಈ ಕುರಿತು ತಾಲೂಕು ಆಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸಲು ಮುಂದಾಗಿ ಎಂದು ಕೋರಲಾಗಿತ್ತು. ಅದರಂತೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಜಿಲ್ಲಾಧಿಕಾರಿ ರವರ ಆದೇಶ ಮೇರೆಗೆ ತಹಶೀಲ್ದಾರ್ ಮೋಹನಕುಮಾರಿ ಶಂಕಹಳ್ಳಿ ಗ್ರಾಮದ ಸ್ಮಶಾನ ಭೂಮಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಒಂದು ಎಕರೆ ಭೂಮಿಯನ್ನು ತೆರವುಗೊಳಿಸಿ ಕೊಟ್ಟರು ಎಂದರು.
ಸ್ಥಳಕ್ಕೆ ಕಂದಾಯ ಇಲಾಖೆ ತಾಲೂಕು ಪಂಚಾಯಿತಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ನಂತರ ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರದಿಂದ ಶಂಕಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಸ್ಮಶಾನ ಭೂಮಿಯನ್ನು ಆದೇಶ ಹೊರಡಿಸಲಾಗಿದೆ. ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮದ ವ್ಯಕ್ತಿ ಭೂಮಿಯನ್ನು ಅಕ್ರಮಿಕೊಂಡು ನನ್ನದೆ ಎಂದು ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ದೂರು ಬಂದಿದೆ. ಅದರಂತೆ ನಮ್ಮ ಇಲಾಖೆ ಅಧಿಕಾರಿಗಳನ್ನು ಸ್ಮಶಾನ ಭೂಮಿಯನ್ನು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ.ಈ ಸ್ಮಶಾನ ಜಾಗ ಶಂಕಹಳ್ಳಿ ಗ್ರಾಮಕ್ಕೆ ಸೇರಿದ ಎಂದು ಗೊತ್ತಾದ ಮೇಲೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಸ್ಮಶಾನ ಜಾಗವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪ್ರೀತಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್, ಪಿಎಸ್ ಐ ಕಿರಣ್, ಆರ್ ಐ ರವಿಚಂದ್ರನ್, ವಿಎ ಚಂದ್ರಶೇಖರ, ಪಿಡಿಒ ಯೋಗೇಂದ್ರ, ಯಜಮಾನರು ಗೌಡಿಕೆ ರಾಜಪ್ಪ, ಶಿವನಂಜಪ್ಪ, ಗಿರಿನಾಯಕ, ಗ್ರಾಪಂ ಸದಸ್ಯ ಎಸ್ ಟಿ ವರದನಾಯಕ, ಮಹೇಶ್ವರಪ್ಪ, ಸಣ್ಣತಿಮ್ಮನಾಯಕ, ನರಸಿಂಹನಾಯಕ, ಶೇಷ ನಾಯಕ, ಗೋಪಾಲ್ ಶೆಟ್ಟರು, ಸಿ.ತಿಮ್ಮನಾಯಕ, ಎಸ್ ಎಸ್ ಬೆಟ್ಟನಾಯಕ, ಗಿರಿನಾಯಕ, ಮಾಜಿ ಯಜಮಾನ ತಿಮ್ಮ ನಾಯಕ ಸರ್ವೆ ನಾಗರಾಜು ಇನ್ನೂ ಮುಖಂಡರು ಸೇರಿದಂತೆ ಎಲ್ಲಾ ಸಮುದಾಯದ ಯಜಮಾನರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW