nammatumakuru

    Subscribe to Updates

    Get the latest creative news from FooBar about art, design and business.

    What's Hot

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026
    Facebook Twitter Instagram
    ಟ್ರೆಂಡಿಂಗ್
    • “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು
    • 26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!
    • ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!
    • ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು
    • ಸಿರಾ: ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಬ್ಲಾಕ್ ಕಾಂಗ್ರೆಸ್ ಒತ್ತಾಯ
    • ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
    • ದೆಹಲಿಯಲ್ಲಿ ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
    • ರಾಜ್ಯ ಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ: ಜುಲೈ 6 ರಂದು ಬೆಂಗಳೂರಿನಲ್ಲಿ ಆಯೋಜನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯೋಗೀಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳು ದೋಷಿ; ಶಿಕ್ಷೆಯ ಪ್ರಮಾಣ ಇಂದು ಪ್ರಕಟ
    ರಾಜ್ಯ ಸುದ್ದಿ April 16, 2026

    ಯೋಗೀಶ್‌ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಸೇರಿ 17 ಆರೋಪಿಗಳು ದೋಷಿ; ಶಿಕ್ಷೆಯ ಪ್ರಮಾಣ ಇಂದು ಪ್ರಕಟ

    By adminApril 16, 2026No Comments1 Min Read
    vinay kulkarni

    ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಜನರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿಗಳೆಂದು ತೀರ್ಪು ನೀಡಿದೆ. ಈ ಮಹತ್ವದ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಇಂದು (ಶುಕ್ರವಾರ) ಪ್ರಕಟಿಸಲಿದೆ.

    ಗುರುವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದಗಳು ನಡೆದವು. ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, “ಇದು ರಾಜಕೀಯ ದುರುದ್ದೇಶದಿಂದ ನಡೆದ ವ್ಯವಸ್ಥಿತ ಕೊಲೆ. ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಭಾವ ಬಳಸಲಾಗಿದೆ. ಆದ್ದರಿಂದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು” ಎಂದು ಮನವಿ ಮಾಡಿದರು.


    Provided by
    Provided by

    ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡ ಶಾಸಕ ವಿನಯ್ ಕುಲಕರ್ಣಿ, “ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ದ್ವೇಷದಿಂದ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ಕೃಷಿಕನಾಗಿದ್ದು, ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ನನಗೆ ಮೂವರು ಮಕ್ಕಳಿದ್ದಾರೆ, ಕುಟುಂಬದ ಜವಾಬ್ದಾರಿ ಇದೆ. ಕ್ಷೇತ್ರದಲ್ಲಿ ಇಲ್ಲದಿದ್ದರೂ ಜನರು ನನ್ನನ್ನು ನಂಬಿ ಗೆಲ್ಲಿಸಿದ್ದಾರೆ” ಎಂದು ಹೇಳುತ್ತಾ ಕಡಿಮೆ ಶಿಕ್ಷೆ ನೀಡುವಂತೆ ಕೋರಿದರು.

    ವಿನಯ್ ಕುಲಕರ್ಣಿ ಅವರ ಪರ ವಕೀಲರು ಕೂಡ ವಾದ ಮಂಡಿಸಿ, ಅವರ ಸಾಮಾಜಿಕ ಕಾರ್ಯಗಳು ಮತ್ತು ಕೌಟುಂಬಿಕ ಹಿನ್ನೆಲೆಯನ್ನು ಪರಿಗಣಿಸಿ ಕನಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ವಿನಂತಿಸಿದರು.

    2016ರಲ್ಲಿ ಧಾರವಾಡದ ಸಪ್ತಾಪುರದಲ್ಲಿ ಜಿ.ಪಂ ಸದಸ್ಯ ಯೋಗೀಶ್‌ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದ ಈ ಪ್ರಕರಣವನ್ನು ನಂತರ ಸಿಬಿಐಗೆ ವಹಿಸಲಾಗಿತ್ತು. ಸುಮಾರು ಎಂಟು ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈಗ ತೀರ್ಪು ಹೊರಬಿದ್ದಿದ್ದು, ಇಡೀ ರಾಜ್ಯದ ಕುತೂಹಲ ನ್ಯಾಯಾಲಯ ನೀಡಲಿರುವ ಶಿಕ್ಷೆಯ ಪ್ರಮಾಣದ ಮೇಲಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026

    Leave A Reply Cancel Reply

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    “ಹೌದು ನಾನು ಏಜೆಂಟ್, ಆದರೆ ಮಾಫಿಯಾ ಕಮಿಷನ್ ಏಜೆಂಟ್ ಅಲ್ಲ”: ಸಿಎಂ ಡಿಕೆಶಿಗೆ ಆರ್. ಅಶೋಕ್ ತಿರುಗೇಟು

    June 11, 2026

    ಬೆಂಗಳೂರು: ಬೆಂಗಳೂರಿನ ಕಸದ ಟೆಂಡರ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ…

    26 ವರ್ಷಗಳ ಹಿಂದೆ ಸರ್ಕಸ್ ಕಂಪನಿ ಜೊತೆ ಓಡಿಹೋಗಿದ್ದ ಸತೀಶ್ ‘ಸಲೀಂ’ ಆಗಿ ಮನೆಗೆ ವಾಪಸ್!

    June 11, 2026

    ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿ; ಪ್ರಿಯಕರನ ಬಂಧನ!

    June 11, 2026

    ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: KRS ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ವಿರುದ್ಧ ಕೇಸು ದಾಖಲು

    June 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.