ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ರಾತ್ರಿಯಾದರೆ ಸಾಕು ಕುಡುಕರ ಅಡ್ಡವಾಗಿಬಿಡುತ್ತೆ. ಇದರಿಂದ ಮಹಿಳೆಯರಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಕೊರಟಗೆರೆ ಶಾಖಾ ಗ್ರಂಥಾಲಯ ಈಗ ಕುಡುಕರ ಅಡ್ಡವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಸಾಕು ಮಧ್ಯಪಾನ, ಧೂಮಪಾನ, ಗುಟ್ಕ ಇತರೆ ಅನೈತಿಕ ಚಟವಟಿಕೆ ತಾಣವಾಗಿದ್ದು, ರಾತ್ರಿ ಅಪರಿಚಿತ ವ್ಯಕ್ತಿಗಳು ಗುಟ್ಕ ವಸ್ತುಗಳನ್ನು ಸೇವಿಸಿ ಗ್ರಂಥಾಲಯ ಮೆಟ್ಟಿಲು ಮತ್ತು ನೆಲದ ಮೇಲೆ ಉಗುಳಿರುವುದು ದುರ್ವಾಸನೆ ಬೀರುತ್ತಿದ್ದು ಅನಾರೋಗ್ಯಕ್ಕೆ ಎಡೆಮಾಡಿ ಕೊಟ್ಟಿದೆ.
ಗುಟ್ಕ ವಸ್ತು ತಿಂದು ಉಗುಳಿದ ಮತ್ತು ಮದ್ಯಪಾನ ಸೇವಿಸಿ, ವಾಂತಿಯನ್ನು ಮಾಡಿರುವುದನ್ನ ಗ್ರಂಥಾಲಯ ಸಿಬ್ಬಂದಿಗಳು ಸ್ವಚ್ಚತೆ ಮಾಡುವಂತಹ ಸ್ಥಿತಿ ಸೃಷ್ಟಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಇಂತಹ ಘಟನೆಗಳು ಮರುಕಳಿಸುತ್ತೀವೆ ಎಂದು ಓದುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ಕಣ್ಗಾವಲಿನಲ್ಲಿಯೇ ಈ ಘಟನೆ:
ಸಮಾಜ ಕಲ್ಯಾಣ ಇಲಾಖೆ ಬಳಿ ಇರುವ ಸಿಸಿ ಟಿವಿಯು ಗ್ರಂಥಾಲಯವನ್ನು ವೀಕ್ಷಿಸಲಿದೆ. ಸಿಸಿ ಟಿವಿ ಭಯವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ, ಇತರೆ ವಸ್ತುಗಳನ್ನು ಬಳಸಿ ಗ್ರಂಥಾಲಯ ಮೆಟ್ಟಿಲು ಮುಂದೆಯೇ ಉಗುಳುತ್ತಾರೆ. ಕಚೇರಿ ಅವಧಿಗೆ ಬಂದಂತಹ ಸಿಬ್ಬಂದಿಗಳೇ ಸ್ವಚ್ಛಗೊಳಿಸುವುದು ಅನಿವಾರ್ಯವಾಗಿದೆ.
ತೆರೆಮರೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯ
ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣದ ತೆರೆಮರೆಯಿಂದ ಕುಡುಕರಿಗೆ ಅವಕಾಶ ಕಲ್ಪಿಸದಂತಾಗಿದೆ. ಕಾನೂನಿನ ಭಯವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮಧ್ಯಪಾನ ಮಾಡುವವರಿಗೆ ಅಧಿಕಾರಿಗಳು ಕಾನೂನಿನ ಪಾಠ ಕಲಿಸಬೇಕಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗ್ರಂಥಾಲಯ ಆವರಣ ರಾತ್ರಿಯಾದರೆ ಕುಡುಕರ ಅಡ್ಡವಾಗಿದೆ. ಉಪ್ಪಿನಕಾಯಿ, ಮಧ್ಯಪಾನ ಖಾಲಿ ಬಾಟಲಿಗಳು, ಬಳಸಿದ ಸಿಗರೇಟ್‌ಗಳು, ಗುಟ್ಕಾ ವಸ್ತು, ಪ್ಲಾಸ್ಟಿಕ್ ಬಾಟಲ್ ಗಳ ಜೊತೆ ವಾಂತಿ ಮತ್ತು ಉಗುಳಿರುವುದನ್ನು ಸ್ವಚ್ಛಗೊಳಿಸುವುದು ನಮ್ಮ ಕೆಲಸನಾ.? ಇದಕ್ಕೇಲ್ಲಾ ಸಂಬಂಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕಿ ಓದುಗರಿಗೆ ಪ್ರೋತ್ಸಾಹಿಸಬೇಕಿದೆ.
— ಹೆಚ್.ಆರ್ ಲಕ್ಷ್ಮಿ, ಗ್ರಂಥಪಾಲಕಿ, ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW