ತುಮಕೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಈ ಬಾರಿ ಕಲಾ, ವಾಣಿಜ್ಯ, ವಿಜ್ಞಾನ ಸೇರಿ 3 ವಿಭಾಗದಲ್ಲೂ ರಾಜ್ಯಕ್ಕೆ ಒಟ್ಟಾರೆ ಶೇ.61.88 ಫಲಿತಾಂಶ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದೆ. ಈ ನಡುವೆ ಶಿಕ್ಷಣ ಸಚಿವರ ತವರು ಜಿಲ್ಲೆ ತುಮಕೂರು 28ನೇ ಸ್ಥಾನ ಪಡೆದುಕೊಂಡಿದೆ. ತುಮಕೂರು ಜಿಲ್ಲೆ ಶೇ.58.90 ಫಲಿತಾಂಶ ದಾಖಲಿಸಿದೆ.
ತುಮಕೂರಿನ ವಿದ್ಯಾನಿಧಿ ಕಾಲೇಜಿನ ಸಹನಾ ಟಿ.ಆರ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಪಿಯುಸಿ ಫಲಿತಾಂಶವನ್ನು https://pue.karnataka.gov.in/ ವೆಬ್ಸೈಟ್ ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದು. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುವ ಮೊಬೈಲ್ ಸಂಖ್ಯೆಗೂ ಫಲಿತಾಂಶದ ಸಂದೇಶ ಕಳುಹಿಸಲಾಗುತ್ತದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz