ಮಧುಗಿರಿ: ಬೆಳಗಾವಿಯಲ್ಲಿ ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿರುವ ಹಾಗೂ ಕನ್ನಡ ಬಾವುಟಕ್ಕೆ ಅಪಮಾನ ಮಾಡಿರುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕರುನಾಡ ವಿಜಯ ಸೇನೆ ಸಂಘಟನೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ನಗರ ಅಧ್ಯಕ್ಷ ರಾಜು, ಮಹಿಳಾ ಘಟಕ ಅಧ್ಯಕ್ಷೆ ಲತಾ ಗೋವಿಂದರಾಜು, ಗೌರವಾಧ್ಯಕ್ಷರಾದ ಲತಾ ನಾರಾಯಣ್, ಮಂಜುಳ ನಾಗಭೂಷಣ್, ಅಲ್ಪಸಂಖ್ಯಾತರ ಘಟಕದ ದಾಧಪೀರ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಸತೀಷ್, ಶ್ರೀನಿವಾಸ್, ದಾದು, ಅಶೋಕ, ವೀಣಾ, ಸವಿತಾ, ಶಾರದ ಹಾಗು ಮುಂತಾದವರು ಇದ್ದರು.
ವರದಿ: ಅಬಿದ್ ಮಧುಗಿರಿ