ಸರಗೂರು: ಪುನೀತ್ ರಾಜಕುಮಾರ್ ಅವರ ಮೂರನೇ ದಿನದ ಕಾರ್ಯದ ಹಿನ್ನೆಲೆಯಲ್ಲಿ ಗ್ರಾಮದ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ನಮನ ಸಲ್ಲಿಸಿದರು.
ಹೆಚ್ ಡಿ ಕೋಟೆ ತಾಲ್ಲೂಕಿನ ಆನಗಟ್ಟಿ ಗ್ರಾಮದಲ್ಲಿ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರವರ ಫೋಟೋ ಗೆ ಪೂಜೆ ಮಾಡಿ, ಮೇಣದ ಬತ್ತಿ ದೀಪ ಬೆಳಗಿಸಿ, ಹಾಲುತುಪ್ಪ ಕಾರ್ಯದ ಪ್ರಯುಕ್ತ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ನಿನ್ನೆ ಬೆಳಿಗ್ಗೆ ಮೂರನೇ ದಿನ ಕಾರ್ಯದ ಪುನೀತ್ ಪೋಟೋಗೆ ಹಾಲನ್ನು ಹಾಕಿ ಹಾಗೂ ಹೂವಿನ ಹಾರ ಹಾಕಿ ಮೇಣದ ಬತ್ತಿ ದೀಪ ಬೆಳಗಿಸಿ ಶಾಂತಿ ಸಂಕೇತವಾಗಿ ಪುನೀತ್ ರಾಜಕುಮಾರ್ ರವರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅಚರಿಸಿದ್ದರು. ಗ್ರಾಮದ ಪುನೀತ್ ರಾಜಕುಮಾರ್ ಅಭಿಮಾನಿಗಳು ಬಳಗವತಿಯಿಂದ ಹಾಗೂ ಗ್ರಾಮಸ್ಥರು ಸೇರಿ ಮಾಡಲಾಯಿತು. ಮತ್ತೆ ಹುಟ್ಟಿ ಬನ್ನಿ ಅಪ್ಪು ಸರ್ ಎಂದು ಇದೇ ವೇಳೆ ಅಭಿಮಾನಿಗಳು ಘೋಷಣೆ ಕೂಗಿದರು.