ಸರಗೂರು: ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ವತಿಯಿಂದ ಸ್ಮರಣೆ ನಡೆಸಲಾಯಿತು. ತಾಲ್ಲೂಕಿನ ಹಾದನೂರು ಗ್ರಾಪಂ ಹಾದನೂರು ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹಾದನೂರು ಪ್ರಮುಖ ಬೀದಿಗಳಲ್ಲಿ ಅಭಿಮಾನಿಗಳು ಮೊಂಬತ್ತಿಯನ್ನು ಹಿಡಿದು ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಭಿಮಾನಿಗಳು ಅಪ್ಪು ಬಗ್ಗೆ ಅಭಿಮಾನಿಗಳು ಮಾಡಿನಾಡಿ ಅವರು ಮಾಡಿರುವ ಸಾಮಾಜಿಕ ಸೇವೆಯನ್ನು ನೆನಪು ಮಾಡಿ ಕಣ್ಣೀರು ಹಾಕಿದ್ದರು.
ಈ ಸಂದರ್ಭದಲ್ಲಿ ಅಭಿಮಾನಿಗಳು, ಗೌರವ ಶಿಕ್ಷಕರಾದ ಸಿದ್ದಯ್ಯ, ಸ್ವಾಮಿ, ಪಾಪಣ್ಣ, ಮದನ್, ಸಿದ್ದರಾಜು, ಗ್ರಾಪಂ ಸದಸ್ಯ ಶಿವರಾಜ್ ಅರಸು, ಜವರಪ್ಪ, ಜವರ ಶೇಷ್ಷಯ್ಯ ಮೊದಲಾದವರು ಇದ್ದರು.