ಹೆಚ್.ಡಿ.ಕೋಟೆ: ತಮಿಳುನಾಡು ರಾಜ್ಯದ ಕೊಯಂತ್ತೂರಿನ ಮುತ್ತು ಸೆಲ್ವರಾಜ್ ಎಂಬುವ ಯುವಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ನಂತರ ಅವರ ವಿಚಾರಗಳನ್ನು ತಿಳಿದು ರಾಜ್ಯ ಮತ್ತು ಅಂತಾರಾಜ್ಯ ಪರ್ಯಾಟನೆ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಪಟ್ಟಣಕ್ಕೆ ಆಗಮಿಸಿದ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಪುನೀತ್ ಅಭಿಮಾನಿಯಾಗಿ ಅವರ ವಿಚಾರಗಳನ್ನು ದೇಶ ವಿದೇಶಗಳಿಗೆ ಬಿತ್ತರಿಸಬೇಕೆಂಬ ಮಹಾದಾಸೆ ನನ್ನದು. ಆದರಿಂದ ಸೈಕಲ್ ನಲ್ಲಿ ಅವರ ವಿಚಾರಗಳನ್ನ ದೇಶದಾದ್ಯಂತ ಭಿತ್ತರಿಸಲು ಆರಂಬಿಸಿದ್ದೇನೆ ಎಂದು ತಿಳಿಸಿದರು.
ಇಂದಿಗೆ ಸುಮಾರು ಎರಡೂ ವರ್ಷಗಳ ಹತ್ತಿರವಾಗಿದ್ದೂ 19,000 ಕಿ.ಲೋ. ಮೀಟರ್ ಕ್ರಮಿಸಿದ್ದೇನೆ ಎಂದು ತಿಳಿಸಿದರು. ಹೆಚ್.ಡಿ.ಕೋಟೆಗೆ ಆಗಮಿಸಿದ ಮುತ್ತುಸೆಲ್ವರಾಜ್ ರನ್ನು ಕಂಡು ಹೆಚ್.ಡಿ ಕೋಟೆ ಜನರು ಹರ್ಷ ವ್ಯಕ್ತಪಡಿಸಿದರು
ಈ ವ್ಯಕ್ತಿಯನ್ನು ಕಂಡ ಕೂಡಲೇ ರಾಜ್ ಕುಟುಂಬದ ಅಪ್ಪಟ ಅಭಿಮಾನಿ ಟೀ ಅಂಗಡಿ ಮುತ್ತಣ್ಣ ಅವರಿಗೆ ಆತ್ಮೀಯತೆಯಿಂದ ಧನ್ಯವಾದವನ್ನು ತಿಳಿಸಿ ಕೇರಳ ರಾಜ್ಯದೆಡೆಗೆ ಬಾವಲಿ ಮಾರ್ಗವಾಗಿ ಬೀಳ್ಕೊಟ್ಟರು
ವರದಿ: ಮಲಾರ ಮಹದೇವಸ್ವಾಮಿ


