ಕಾರವಾರ : ನಟ ಪುನೀತ್ ರಾಜ್ ಕುಮಾರ್ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪುನೀತ್ ಅಭಿಮಾನಿಯೊಬ್ಬರು ಈಗಾಗಲೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅರುಣ್ ಪರಮೇಶ್ವರ್ ಎಂಬವರು ಈ ದೂರು ದಾಖಲಿಸಿದ್ದು, ಪುನೀತ್ ರಾಜ್ ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣವೇ ಅವರು ರಮಣಶ್ರೀ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಸೂಕ್ತ ಚಿಕಿತ್ಸೆ ದೊರಕಿಲ್ಲ ಎನಿಸುತ್ತಿದೆ. ಅಲ್ಲದೇ ತಡವಾಗಿ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಗೆ ಆಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಅಭಿಮಾನಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪುನೀತ್ ಎಷ್ಟು ಗಂಟೆಗೆ ರಮಣಶ್ರೀ ಆಸ್ಪತ್ರೆಗೆ ದಾಖಲಾದರು. ಎದೆನೋವಿನ ಬಗ್ಗೆ ಎಷ್ಟು ನಿಮಿಷಗಳ ಕಾಲ ರಮಣಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಯಾವ ಮಾತ್ರೆಗಳನ್ನು ನೀಡಲಾಗಿದೆ. ಬಳಿಕ ಎಷ್ಟು ಗಂಟೆಗೆ ಅವರು ವಿಕ್ರಂ ಆಸ್ಪತ್ರೆಗೆ ತೆರಳಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮಜರಗಿಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ದೂರಿನಲ್ಲಿ ಇರುವ ಕೆಲವು ಸತ್ಯ ಇರುವ ಕಾರಣ ಈ ಕನ್ನಡ ನೆಲದ ಮಾಣಿಕ್ಯ ಪುನೀತ್ ರಾಜಕುಮಾರ್ ಸಾವಿನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಸರ್ಕಾರ ಈ ಸಾವಿನ ಪ್ರಕರಣವನ್ನು ಸಿ.ಓ.ಡಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಣಧೀರರ ವೇಧಿಕೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ ಆಗ್ರಹಿಸಿದ್ದಾರೆ.
ವರದಿ : ಮಂಜುಸ್ವಾಮಿ.ಎಂ.ಎನ್ .
ವಾಟ್ಸಾಪ್ ಗ್ರೂಪ್ ಸೇರಿ: