ತಿಪಟೂರು: ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಗರದ ಅಣ್ಣಾಪುರದ ಹೊಸಬಡಾವಣೆಯಲ್ಲಿ ಮಂಗಳವಾರ ವಿದ್ಯಾಗಣಪತಿ ಯುವಕರ ಸಂಘವು ಆಯೋಜಿಸಿದ ರಕ್ತದಾನ ಶಿಬಿರದಲ್ಲಿ 50 ಯೂನಿಟ್ ರಕ್ತ ಸಂಗ್ರಹವಾಯಿತು.
ಇದೇ ವೇಳೆ 26ಕ್ಕೂ ಹೆಚ್ಚು ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡರು. ಜಿಲ್ಲಾ ಆಸ್ಪತ್ರೆಯ ರಕ್ತಸಂಗ್ರಹನಿಧಿ ವೈದ್ಯ ಡಾ.ಪ್ರದೀಪ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಕೋವಿಡ್ ನಂತರದ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ಕ್ಷೀಣಿಸಿದೆ. ಹಾಗಾಗಿ ಅಗತ್ಯದ ಸಂದರ್ಭದಲ್ಲಿಯೂ ಕೆಲವೊಮ್ಮೆ ರಕ್ತ ದೊರೆಯುತ್ತಿಲ್ಲ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸಲಿದೆ. ಒಬ್ಬರು ರಕ್ತ ನೀಡುವುದರಿಂದ ಸುಮಾರು 4 ಜನರ ಜೀವ ಕಾಪಾಡುವ ಅವಕಾಶ ದೊರೆಯುತ್ತದೆ ಎಂದು ಜಾಗೃತಿ ಮೂಡಿಸಿದರು.
ವಿದ್ಯಾಗಣಪತಿ ಯುವಕರ ಸಂಘದ ಅಧ್ಯಕ್ಷ ಪ್ರಭು, ತಿಪಟೂರು ತಾಲ್ಲೂಕು ಆಸ್ಪತ್ರೆಯ ಲ್ಯಾಬ್ ನ ರಾಘವ್, ಆಪ್ತ ಸಮಾಲೋಚಕ ಉಮೇಶ್, ಹೇಮಂತ್, ಪ್ರಕಾಶ, ಭರತ್, ಪಾಂಡು, ಮಂಜುನಾಥ್, ಜಯಂತ್, ಹೇಮಂತ್ ಕುಮಾರ್, ಸಂಪತ್, ಪ್ರದೀಪ್ ಇದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700.