ಬೆಂಗಳೂರು: ಬೇರೆಯವರ ಹೆಸರಲ್ಲಿ ಸಿಮ್ ಪರ್ಚೇಸ್ ಮಾಡಿ ವಿದೇಶಕ್ಕೆ ಸಾಗಿಸುತ್ತಿದ್ದವನನ್ನು ಕಸ್ಟಮ್ಸ್ ಅಧಿಕಾರಿಗಳು ಏರ್ ಪೋರ್ಟ್ ನಲ್ಲಿ ಲಾಕ್ ಮಾಡಿದ್ದಾರೆ. ಶ್ರೀನಿವಾಸ್ ಎಂಬಾತ ಬಂಧಿತ ಆರೋಪಿ ಎನ್ನಲಾಗಿದೆ.
ಆನ್ ಲೈನ್ ವಂಚನೆಗೆ ದೇಶಿ ಸಿಮ್ ಕಾರ್ಡ್ ಸಂಗ್ರಹಿಸಿ ವಿದೇಶಕ್ಕೆ ಆರೋಪಿ ಮಾರಾಟ ಮಾಡುತ್ತಿದ್ದ. ಭಾರತದಲ್ಲಿನ ಸಿಮ್ ಕಾರ್ಡ್ ಖರೀದಿಸಿ ವಿದೇಶಕ್ಕೆ ಸಾಗಾಟ ಮಾಡುತ್ತಿದ್ದ. ಏರ್ಪೋರ್ಟ್ ನಲ್ಲಿ ಅಧಿಕಾರಿಗಳ ಪರಿಶೀಲನೆ ವೇಳೆ ಕಿಲಾಡಿ ಸಿಕ್ಕಿ ಬಿದ್ದಿದ್ದಾನೆ.
ವಿಶಾಖಪಟ್ಟಣದಿಂದ ವಿಯೆಟ್ನಾಂಗೆ ಸಿಮ್ ಕಾರ್ಡ್ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಭಾರತೀಯ ಸಿಮ್ ಕಾರ್ಡ್ ಬಳಸಿಕೊಂಡು ಇಲ್ಲಿನ ಜನರಿಗೆ ಮೆಸೇಜ್, ಕರೆಗಳ ಮೂಲಕ ವಂಚನೆಗೆ ಯತ್ನಿಸುತ್ತಿರುವುದು ತಿಳಿದು ಬಂದಿದೆ. ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೇರೆ ಬೇರೆ ವ್ಯಕ್ತಿಗಳಿಂದ ಸಿಂಗಲ್ ಆಗಿ ಸಿಮ್ ಕಾರ್ಡ್ ಪಡೆದಿರೋ ಬಗ್ಗೆ ಮಾಹಿತಿ ದೊರೆತಿದೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


