ಆಕೆ ೭ ರಿಂದ ೮ ವರ್ಷದ ಪುಟ್ಟ ಬಾಲೆ.. ಆದ್ರೇ.. ವಿಧಿಯಾಟಕ್ಕೆ ಬಲಿಯಾಗಿ ಚಿಕ್ಕವಯಸ್ಸಿನಲ್ಲಿಯೇ ತನ್ನ ಎಡಗೈ ಕಳೆದುಕೊಂಡಿದ್ದಳು. ಕೃತಕ ಕೈಜೋಡಣೆಯ ಮೂಲಕ, ಜೋವನೋತ್ಸಾಹ ಮೆರೆಯುತ್ತಿದ್ದ ಬಾಲಕಿಯ ಚಿಕಿತ್ಸೆಗಾಗಿ, ಕೆ ಎಸ್ ಆರ್ ಟಿಸಿಯ ಚಾಲಕ ಸೇವೆ ಬಿಟ್ಟು, ದೀರ್ಘಕಾಲಿಕ ರಜೆ ಕೂಡ ಪಡೆಯುವಂತೆ ಆಗಿ, ಕೆಲಸ ಕಳೆದುಕೊಳ್ಳುವಂತೆ ಆಗಿತ್ತು. ಆದ್ರೇ.. ಮಾನವೀಯ ಅಂತಹಃ ಕರಣದ ಕೆ ಎಸ್ ಆರ್ ಟಿ ಸಿ ಎಂ.ಡಿ ಭೇಟಿಯಾದ ಒಂದೇ ಕ್ಷಣದಲ್ಲಿ, ಆ ಪುಟ್ಟ ಬಾಲೆಯ ಮಾತುಗಳಿಗೆ ಭಾವುಕರಾದಂತ ಎಂಡಿ, ಚಾಲಕನಿಗೆ ಮರು ಆದೇಶ ನೀಡಿ, ಮಾನವೀಯತೆ ಮೆರೆದಿದ್ದಾರೆ.
ಹೌದು.. ಕು. ಭೂಮಿಕ, ವಯಸ್ಸು ೭ ರಿಂದ ೮ ಆಸುಪಾಸು, ಮುಗ್ಧತೆ, ಪ್ರಾಮಾಣಿಕತೆಯೊಡನೆಯೇ, ವಿಧಿಯಾಟಕ್ಕೆ ಬಲಿಯಾಗಿ ಚಿಕ್ಕ ವಯಸ್ಸಿನಲ್ಲಿಯೇ ವೈದ್ಯಕೀಯ ಲೋಪದಿಂದ ತನ್ನ ಎಡಗೈಯನ್ನು ಭಾಗಷಃ ಕಳೆದುಕೊಂಡು ಕೃತಕ ಕೈಜೋಡಣೆಯೊಂದಿಗಿದ್ದರೂ ಜೀವನೋತ್ಸಾಹ ಹೊಂದಿದ್ದಳು. ಈ ಬಾಲಕಿಯ ತಂದೆ ದೀರ್ಘಾವಧಿ ಗೈರುಹಾಜರಿ ಪ್ರಕರಣದಲ್ಲಿ ನಿಗಮದಿಂದ ವಜಾ ಆಗಿದ್ದು, ಕೆಲಸವಿಲ್ಲದೆ ಜೀವನ ನಡೆಸುವುದಕ್ಕೆ ಕಷ್ಟ ಪಡುತ್ತಿದ್ದು, ಮಗುವಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವುದು ದೂರದ ಮಾತಾಗಿತ್ತು.
ಹೀಗಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಂತಃಕರಣ ಬಗ್ಗೆ ಈಗಾಗಲೇ ಸಿಬ್ಬಂದಿಗಳಿಂದ ಕೇಳಿದ್ದಂತ ಚಾಲಕ ಮಗಳೊಂದಿಗೆ ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಪುಕುಮಾರ್ ಅವರನ್ನು ಭೇಟಿ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರು ಆ ಮಗುವನ್ನು ಮಾತನಾಡಿಸಿ, ಚಾಕೋಲೇಟ್ ನೀಡಿ, ಆಕೆಯ ಕಷ್ಟವನ್ನು ಕೇಳಿದ್ದಾರೆ. ಬಳಿಕ ಅಪ್ಪನಿಗೆ ಕೆಲಸ ಕೊಡಬೇಕಾ ಎಂದಾಗ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಆ ಮಗುವು ಮಾತು ಕೇಳಿ ಕ್ಷಣಕಾಲ ಭಾವುಕರಾಗಿದ್ದಾರೆ.
ಈ ಬಳಿಕ, ವ್ಯವಸ್ಥಾಪಕ ನಿರ್ದೇಶಕರು, ಲೋಕೇಶ್ ಚಾಲಕ -ಕಂ-ನಿರ್ವಾಹಕ ಬಿಲ್ಲೆ ಸಂಖ್ಯೆ ೨೮೩ , ಚಿಕ್ಕಮಗಳೂರು ವಿಭಾಗರವರಿಗೆ ಮರುನೇಮಕ ಆದೇಶ ನೀಡಿ ಆ ಮಗುವಿಗಾಗಿ ಮತ್ತೊಮ್ಮೆ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಮತ್ತೊಮ್ಮೆ ಗೈರುಹಾಜರಿ ಆದರೆ ಯಾವುದೇ ವಿನಾಯಿತಿ ನೀಡದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB