ತುಮಕೂರು: ತಮ್ಮ ಒತ್ತಡದ ಕೆಲಸದ ನಡುವೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ರವರು ಮಗುವಿನೊಂದಿಗೆ ಮಗುವಾಗಿ ಕೆಲಹೊತ್ತು ಕಾಲಕಳೆದ ಘಟನೆ ತಾಲ್ಲೂಕಿನ ಹರಿವಾಣಪುರದಲ್ಲಿ ನಡೆಯಿತು.
ಶುಕ್ರವಾರ ಗ್ರಾಮದ ಅಂಗನವಾಡಿ ಕಟ್ಟಡ ಉದ್ಘಾಟನೆಗಾಗಿ ಗ್ರಾಮಕ್ಜೆ ತೆರಳಿದ್ದ ಶಾಸಕರು ಕಾರ್ಯಕ್ರಮದ ನಂತರ, ಅರಳೀಕಟ್ಟೆಯ ಕೆಳಗೆ ಕುಳಿತು ಗ್ರಾಮಸ್ಥರ ಕುಂದು ಕೊರತೆ ಆಲಿಸುತ್ತಿದ್ದರು. ಈ ವೇಳೆ ವೇಳೆ ಅಲ್ಲಿಯೇ ಇದ್ದ ಮೂರು ವರ್ಷದ ಮಗುವಿನೊಂದಿಗೆ ಆನಂದವಾಗಿ ಮಾತನಾಡಿ ಮುಗ್ದ ಮಗುವಿನ ಮಾತಿಗೆ ನಕ್ಕು ನಲಿದರು.
“ನಿನ್ನ ವಯಸ್ಸೆಷ್ಟು?” ಎಂದು ಕೇಳಿದಾಗ “ನನಗೆ ಇನ್ನು ವಯಸ್ಸಾಗಿಲ್ಲ” ಎಂದು ಮಗು ಹೇಳಿದಾಗ ಶಾಸಕ ಗೌರಿಶಂಕರ್ ಬಿದ್ದು ಬಿದ್ದು ನಕ್ಕರು. ಈ ವೇಳೆ ಅವರ ಜೊತೆಗಿದ್ದವರು ಕೂಡ ಜೋರಾಗಿ ನಕ್ಕರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy