ಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ಈ ಆರ್ಥಿಕ ವರ್ಷದಲ್ಲಿ ಕಾರ್ಯನಿರ್ವಹಿಸದ ತನ್ನ 70 ಸ್ಕ್ರೀನ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಅದರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ಮುಂಬೈ, ಪುಣೆ ಮತ್ತು ವಡೋದರದಂತಹ ಪ್ರಮುಖ ಸ್ಥಳಗಳಲ್ಲಿ ಕಾರ್ಯನಿರ್ವಹಿಸದ ಸ್ಕ್ರೀನ್ ಗಳನ್ನು ಮುಚ್ಚಲಾಗುತ್ತದೆ.
“ನಮ್ಮ ಕಂಪನಿಯ ಮಧ್ಯಮ ಮತ್ತು ದೀರ್ಘಾವಧಿಯ ಕಾರ್ಯತಂತ್ರವು ದಕ್ಷಿಣ ಭಾರತದಲ್ಲಿ ಚಲನಚಿತ್ರಗಳಿಗೆ ಹೆಚ್ಚಿನ ಬೇಡಿಕೆ ಮತ್ತು ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಮಲ್ಟಿಪ್ಲೆಕ್ಸ್ ಗಳ ಕಾರಣದಿಂದಾಗಿ ಅಲ್ಲಿ ಪರದೆಗಳ ಸಂಖ್ಯೆಯನ್ನು ವಿಸ್ತರಿಸುವುದನ್ನು ಒಳಗೊಂಡಿರುತ್ತದೆ. ನಮ್ಮ ಒಟ್ಟು ಸ್ಕ್ರೀನ್ ಸೇರ್ಪಡೆಗಳಲ್ಲಿ ಸರಿಸುಮಾರು 40% ದಕ್ಷಿಣ ಭಾರತದಿಂದ ಬರುತ್ತದೆ ಎಂದು ನಾವು ಅಂದಾಜಿಸಿದ್ದೇವೆ, “ಎಂದು ಕಂಪನಿ ಹೇಳಿದೆ.
ವರದಿ ಪ್ರಕಾರ ಪಿವಿಆರ್ ಐನಾಕ್ಸ್ ಈ ವರ್ಷ 130 ಹೊಸ ಸ್ಕ್ರೀನ್‌ಗಳನ್ನು ತೆರೆಯಿತು. ಆದರೆ ಕಡಿಮೆ ಪ್ರದರ್ಶನದ ಕಾರಣದಿಂದಾಗಿ 85 ಸ್ಕ್ರೀನ್ ಗಳನ್ನು ಮುಚ್ಚಿದೆ. ಆರ್ಥಿಕ ವರ್ಷ 24 ರಲ್ಲಿ ಪಿವಿಆರ್ ಐನಾಕ್ಸ್ ನ ನಿವ್ವಳ ಸಾಲವು ₹1,294 ಕೋಟಿ ಆಗಿತ್ತು. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ತನ್ನ ನಿವ್ವಳ ಸಾಲವನ್ನು ₹136.4 ಕೋಟಿಗಳಷ್ಟು ಕಡಿಮೆ ಮಾಡಿದೆ ಎಂದು ವರದಿ ಹೇಳಿದೆ. ಕಂಪನಿಯ ಆದಾಯವು ₹6,203.7 ಕೋಟಿ ಇದ್ದರೆ ₹114.3 ಕೋಟಿ ನಷ್ಟವಾಗಿದೆ. ಇದು ಪಿವಿಆರ್ ಐನಾಕ್ಸ್ ವಿಲೀನಗೊಂಡ ಘಟಕದ ಮೊದಲ ಪೂರ್ಣ ವರ್ಷ ಕಾರ್ಯಾಚರಣೆಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಟಿಕೆಟ್ ದರಗಳಲ್ಲಿ 10 ಪ್ರತಿಶತದಷ್ಟು, ಆಹಾರ ಮತ್ತು ಪಾನೀಯದ ಮೇಲೆ ಶೇ.11 ರಷ್ಟು ದರ ಹೆಚ್ಚಳ ಮಾಡಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q