ಬೆಂಗಳೂರು: ಬಿಬಿಎಂಪಿಯ ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಒಟ್ಟು 9 ಮಂದಿಗೆ ಗಾಯವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಲ್ಲಿ 2 ಮಹಿಳೆಯರು, 7 ಪುರುಷರಿಗೆ ಗಾಯವಾಗಿದೆ ಎಂಬ ಮಾಹಿತಿ ತಿಳಿದಿದೆ.
ಮುಖ್ಯ ಅಭಿಯಂತರರಾದ ಶಿವಕುಮಾರ್ ರವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕರೆತರಲಾಗಿದೆ. ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಗಳ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಇನ್ನು ಗಾಯಗೊಂಡವರ ಹೆಸರಿನ ಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ.
1. ಶಿವಕುಮಾರ್, ಮುಖ್ಯ ಅಭಿಯಂತರರು.
2. ಕಿರಣ್, ಕಾರ್ಯಪಾಲಕ ಅಭಿಯಂತರರು.
3. ಸಂತೋಷ್ ಕುಮಾರ್, ಕಾರ್ಯಪಾಲಕ ಅಭಿಯಂತರರು.
4. ವಿಜಯಮಾಲ, ಕಾರ್ಯಪಾಲಕ ಅಭಿಯಂತರರು.
5. ಶ್ರೀಧರ್, ಸಹಾಯಕ ಕಾರ್ಯಪಾಲಕ ಅಭಿಯಂತರರು.
6. ಸಿರಾಜ್, ಪ್ರಥಮ ದರ್ಜೆ ಸಹಾಯಕರು.
7. ಜ್ಯೋತಿ, ಆಪರೇಟರ್,
8. ಶ್ರಿನಿವಾಸ್, ಪ್ರಾಜೆಕ್ಟ್ ಮ್ಯಾನೇಜೆಂಟ್ ಕನ್ಸಲ್ವೆಂಟ್.
9. ಮನೋಜ್, ಗಣಕಯಂತ್ರ ನಿರ್ವಾಹಕರು ಎಂದು ಗುರುತಿಸಲಾಗಿದೆ.


