ವಿಮಾನದೊಳಗೆ ದಂಪತಿಗಳ ನಡುವೆ ಜಗಳ ನಡೆದ ನಂತರ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರ ಅನುಚಿತ ವರ್ತನೆಯಿಂದ ಸ್ವಿಟ್ಜರ್ಲೆಂಡ್ ನ ಮ್ಯೂನಿಚ್ ನಿಂದ ಬ್ಯಾಂಕಾಕ್ ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.
ಲುಫ್ಥಾನ್ಸ (LH772) ವಿಮಾನವು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಗಂಡ ಹೆಂಡತಿ ಜಗಳಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ವೈಮಾನಿಕ ಭದ್ರತಾ ಸಿಬ್ಬಂದಿ ಎಎನ್ ಐಗೆ ತಿಳಿಸಿದ್ದಾರೆ, ಇಬ್ಬರ ನಡುವಿನ ಜಗಳದ ನಂತರ ವಿಮಾನವನ್ನು ಬೇರೆಡೆಗೆ ತಿರುಗಿಸಲಾಯಿತು.
ವಿಮಾನವು ಆರಂಭದಲ್ಲಿ ಪಾಕಿಸ್ತಾನದಲ್ಲಿ ಇಳಿಯಲು ಅನುಮತಿ ಕೋರಿತ್ತು ಆದರೆ ಬಹಿರಂಗಪಡಿಸದ ಕಾರಣಗಳಿಗಾಗಿ ಪಾಕಿಸ್ತಾನದ ಅಧಿಕಾರಿಗಳು ಅನುಮತಿ ನಿರಾಕರಿಸಿದರು. ನಂತರ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಅಶಿಸ್ತಿನ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಭದ್ರತೆಗೆ ಒಪ್ಪಿಸಲಾಗಿದೆ.


