ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ.. ಹಿಂದುಧರ್ಮ ಯಾವಾಗ ಹುಟ್ಟಿತು ಎಂಬುದೇ ಪ್ರಶ್ನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಹಿಂದೂಧರ್ಮ ಯಾವಾಗ ಹುಟ್ಟಿತು ಯಾರು ಹುಟ್ಟುಹಾಕಿದ್ರು ಎಂಬುದೇ ಇನ್ನೂ ಪ್ರಶ್ನೆಯಾಗಿ ಉಳಿದಿದೆ.. ನಮ್ಮ ದೇಶದಲ್ಲಿ ಬೌದ್ಧಧರ್ಮ ಮತ್ತು ಜೈನಧರ್ಮ ಹುಟ್ಟಿರುವ ಇತಿಹಾಸವಿದೆ. ವಿದೇಶದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ನಮ್ಮ ದೇಶಕ್ಕೆ ಬಂದಿದೆ ಎಂದರು.
ಪ್ರಪಂಚದ ಎಲ್ಲಾ ಧರ್ಮಗಳ ಸಾರಾಂಶ ಒಂದೇ ಮನುಕುಲಕ್ಕೆ ಒಳ್ಳೆದಾಗಲಿ ಎಂಬುದು ಅಷ್ಟೆ ಎಂದು ಗೃಹಸಚಿವ ಡಾ.ಜಿ. ಜಿ.ಪರಮೇಶ್ವರ್ ಕೊರಟಗೆರೆ ಶಿಕ್ಷಕರ ದಿನಾಚರಣೆ ವೇಳೆ ತಿಳಿಸಿದರು.