ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಗೆ ಅಗೌರವ ತೋರಿಸಿದ್ದಾರೆಂದು ಆರೋಪಿಸಿ ಪ್ರಸಿದ್ಧ ಆಫ್ಘಾನ್ ಫ್ಯಾಷನ್ ಮಾಡೆಲ್ ಸೇರಿದಂತೆ ಮೂವರನ್ನು ತಾಲಿಬಾನ್ ಬಂಧಿಸಿದೆ.
ಮಾಡೆಲಿಂಗ್, ಕಾರ್ಯಕ್ರಮಗಳಗೆ ಹೆಸರು ವಾಸಿಯಾದ ಅಜ್ಮಲ್ ಹಖಿಕಿ ಅವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಗುಪ್ತಚರ ಸಂಸ್ಥೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.
ಅಜ್ಮಲ್ ಹಖಿಕಿ ಹಾಸ್ಯದ ರೀತಿಯಲ್ಲಿ ಕುರಾನ್ ನ ಪದ್ಯಗಳನ್ನು ಅರೇಬಿಕ್ ನಲ್ಲಿ ಪಠಿಸಿದ ವಿಡಿಯೋ ವೈರಲ್ ಆಗಿತ್ತು. ಬಂಧನದ ನಂತರ, ತಾಲಿಬಾನ್ ಹಖಿಕಿ ಮತ್ತು ಅವರ ಸಹೋದ್ಯೋಗಿಗಳ ವೀಡಿಯೊವನ್ನು ಬಿಡುಗಡೆ ಮಾಡಿದೆ.
ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಿಕಿ ಕ್ಷಮೆಯಾಚಿಸಿದರು. ಇನ್ನೂ, ಕುರಾನ್ ಪದ್ಯಗಳನ್ನು ಅಥವಾ ಪ್ರವಾದಿ ಮಹಮ್ಮದ್ ಅವರ ಮಾತುಗಳನ್ನು ಅವಮಾನಿಸಲು ಯಾರಿಗೂ ಅವಕಾಶವಿಲ್ಲ ಎಂದು ವಿಡಿಯೊನಲ್ಲಿ ಉಲ್ಲೇಖಿಸಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz