ತಿಪಟೂರು: ರಾಜ್ಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಗಿ ಬೆಳೆಗಾರರು ಕಂಗಾಲಾಗಿದ್ದು, ರಾಗಿಗೆ ಬೆಂಬಲ ಬೆಲೆ ಘೋಷಿಸುವಂತೆ ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಒತ್ತಾಯ ಮಾಡಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು ಬೆಳೆ ಕೈಸೇರುವ ಹಂತದಲ್ಲಿದ್ದಾಗ ಅಕಾಲಿಕ ಮಳೆಯಿಂದಾಗಿ ರಾಗಿ ನೆಲಕಚ್ಚಿ ಮೊಳಕೆ ಒಡೆದು ಅನ್ನದಾತರಿಗೆ ತುಂಬಲಾಗದ ನಷ್ಟವಾಗಿದೆ. ರೈತರು ಬಿತ್ತನೆ ಮಾಡುವಾಗ ಒಂದು ಲಕ್ಷ ಅಧಿಕ ಹಣ ಖರ್ಚಾಗುತ್ತಿದೆ. ಆದರೆ, ಇದೀಗ ರಾಗಿಗೆ ಉತ್ತಮ ಬೆಲೆಯೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಹೀಗೆ ಆದರೆ ನಮ್ಮ ಅನ್ನದಾತರು ರಾಗಿ ಬೆಳೆಯಲು ಆಗದೆ ಕೈ ಬಿಡುವ ಪರಿಸ್ಥಿತಿ ನಿರ್ಮಾಣವಾಗುವ ಬೇಕಾಗುತ್ತದೆ ಎಂದು ಶಾಂತಕುಮಾರ್ ಆತಂಕ ವ್ಯಕ್ತಪಡಿಸಿದರು.
ಸರ್ಕಾರ ರೈತರ ಬಗ್ಗೆ ಗಮನಹರಿಸಿ ರಾಗಿಗೆ ಕ್ವಿಂಟಲ್ 4,500 ಸಾವಿರ ಬೆಂಬಲ ಬೆಲೆ ಕೊಟ್ಟು, ಅನ್ನದಾತರನ್ನು ಕೈ ಹಿಡಿಯಬೇಕು ಎಂದು ಅವರು ಇದೇ ವೇಳೆ ಸರ್ಕಾರವನ್ನು ಒತ್ತಾಯಿಸಿದರು. ಕಟಾವು ಯಂತ್ರದ ಒಂದೊಂದು ಕಡೆ ಹಣ ಹೆಚ್ಚಳದಿಂದ ಕೇಳುತ್ತಿದ್ದಾರೆ ಒಂದು ಗಂಟೆ ನಿಗದಿತ ಹಣವನ್ನು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಬೇಕು. ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಸುದರ್ಶನ್ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.
ವರದಿ: ಮಂಜು ಗುರಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700