ತುಮಕೂರು: ಭೂಮಿ ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ನೀಡದ ನಗರದ ತುಮಕೂರು ರಾಯದುರ್ಗ, ತುಮಕೂರು, ದಾವಣಗೆರೆ ರೈಲು ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿ ಪೀಠೋಪಕರಣವನ್ನು ಜಪ್ತಿ ಮಾಡಲಾಯಿತು.
ತಾಲ್ಲೂಕಿನ ಹರಿಯಪ್ಪನಹಳ್ಳಿ ಗ್ರಾಮದ ರೈತ ಚಿಕ್ಕವೀರಯ್ಯ ಅವರ ಕೋರ ಗ್ರಾಮದ ಸರ್ವೇನಂ.69/5 ಮತ್ತು 67/1 ಒಟ್ಟು 1 ಎಕರೆ 7 ಗುಂಟೆ ಜಮೀನನ್ನು ತುಮಕೂರು ದಾವಣಗೆರೆ ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ಸರ್ಕಾರ ನಿಗದಿಪಡಿಸಿದಂತೆ 70 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಮಾರುಕಟ್ಟೆಯ ದರ ನೀಡುವಂತೆ ಚಿಕ್ಕವೀರಯ್ಯ ಕೋರ್ಟ್ ಮೊರೆ ಹೋಗಿದ್ದರು. ಮೂರು ತಿಂಗಳ ಒಳಗೆ 1.30 ಕೋಟಿ ಹೆಚ್ಚುವರಿ ಪರಿಹಾರ ನೀಡುವಂತೆ ತುಮಕೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು.
ಪರಿಹಾರ ನೀಡದ ಕಾರಣ ತುಮ ಕೂರು ರಾಯದುರ್ಗ ತುಮಕೂರು ದಾವಣಗೆರೆ ರೈಲು ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯ ಪೀಠೋಪಕರಣವನ್ನು ಜಪ್ತಿ ಮಾಡಲಾಯಿತು. ಈ ಪ್ರಕರಣ ಸಂಬಂಧ ರೈತ ಚಿಕ್ಕವೀರಯ್ಯ ಪರವಾಗಿ ವಕೀಲರಾದ ಹೆಚ್. ಆರ್. ಕಾಂತರಾಜು ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


