ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ನೀರೆಲ್ಲಾ ಅಪಾರ್ಟ್ಮೆಂಟ್ ಗೆ ಪ್ರವೇಶವಾಗಿದೆ. ಅನ್ನಪೂರ್ಣೇಶ್ವರಿನಗರದ ಚಂದನ ಅಪಾರ್ಟ್ಮೆಂಟ್ ಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿ ಆಗಿದೆ.
ಮೂರಡಿ ನಿಂತ ಮಳೆನೀರಿನಿಂದ ಅಪಾರ್ಟ್ಮೆಂಟ್ ನಿವಾಸಿಗಳ ಪರದಾಟ ಹಿನ್ನೆಲೆ. ನೀರು ತಂಬಿ 12 ಗಂಟೆ ಬಳಿಕ ರಕ್ಷಣಾ ತಂಡ ಆಗಮಿಸಿದೆ. ಫೈರ್ ಸ್ಟೇಷನ್ ಸಿಬ್ಬಂದಿಗಳಿಂದ ತುಂಬಿದ್ದ ನೀರು ತೆರವು ಮಾಡಲಾಗಿದೆ.
ಅಗ್ನಿ ಶಾಮಕದಳದ ಎಂಟು ಜನರ ಸಿಬ್ಬಂದಿಯಿಂದ ನೀರು ತೆರವು ಮಾಡಲಾಗಿದೆ. ಚಂದನ ಅಪಾರ್ಟ್ಮೆಂಟ್ ನ ಬೇಸ್ಮೆಂಟ್ ನಲ್ಲಿದ್ದ ವಾಹನಗಳು ಮುಳುಗಡೆ ಆಗಿದ್ದವು. ಮೂಡರಡಿ ನಿಂತ ಮಳೆ ನೀರಿನಿಂದ ವಾಹನಗಳು ಮುಳುಗಡೆ ಆಗಿದ್ದವು. ನೀರು ತೆರವು ಮಾಡುವಂತೆ ಬಿಬಿಎಂಪಿಗೆ ಕರೆ ಮಾಡಿದ್ರೂ ರೆಸ್ಪಾನ್ಸ್ ಮಾಡಿರಲಿಲ್ಲ. ನಾಗರಬಾವಿ ಬಳಿ ಇರುವ ಹೆಲ್ತ್ ಲೇಔಟ್ ನ ಚಂದನಾ ಅಪಾರ್ಟ್ಮೆಂಟ್ ನಡೆದಿರುವ ಘಟನೆ ಇದಾಗಿದೆ. ಕಳೆದ ಒಂದು ಗಂಟೆಯಿಂದ ಬೇಸ್ಮೆಮೆಂಟ್ ನಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296