ಗುಬ್ಬಿ: ಚೇಳೂರು ಹೋಬಳಿಯ ರಂಗನಹಳ್ಳಿ ಗ್ರಾಮದ ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತ ಕುಟುಂಬಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾದರೆ ಅಧಿಕಾರಿಗಳನ್ನು ರೈತರೇ ಕಟ್ಟಿಹಾಕಿ ಕೇಸು ದಾಖಲಿಸುತ್ತಾರೆ ಎಂದು ಬಗ್ಗೆ ಗುಬ್ಬಿ ಶಾಸಕ ಎಸ್. ಆರ್.ಶ್ರೀ ನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಗುಬ್ಬಿ ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 40ವರ್ಷಗಳಿಂದ ಜಮೀನಿನಲ್ಲಿ ಅನುಭವದಲ್ಲಿದ್ದು, ಕಂದಾಯ ಇಲಾಖೆ ವತಿಯಿಂದ ಸಾಗುವಳಿ ಪತ್ರ ಪಡೆದು ಲಕ್ಷಾಂತರ ರೂ. ಹಣ ವ್ಯಯಿಸಿ ಜಮೀನು ಅಭಿವೃದ್ಧಿ ಪಡಿಸಿ ಕೆಲ ಕುಟುಂಬದವರು ವಾಸದ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಸ್ವತ್ತು ನಮಗೆ ಸೇರಿದ್ದು ಎಂದು ಅನುಭವದಲ್ಲಿರುವ ರೈತರನ್ನು ಸ್ಥಳ ಬೀಡುವಂತೆ ಮತ್ತು ಜಮೀನಿನಲ್ಲಿ ಬೆಳೆದ ಬೆಳೆ ನಾಶಪಡಿಸುವುದು ಹಾಗೂ ಕೇಸು ದಾಖಲು ಮಾಡುವುದಾಗಿ ಹೆದರಿಸುವುದು ಸರಿಯಲ್ಲ, ಅರಣ್ಯ ಇಲಾಖೆ ಜಮೀನು ನಿಮ್ಮದಾಗಿದ್ದರೆ ಇಷ್ಟು ವರ್ಷಗಳ ಕಾಲ ಇಲಾಖೆ ಅಧಿಕಾರಿಗಳು ಏನು ಮಾಡುತ್ತೀದ್ದೀರಿ. ಇಷ್ಟು ದಿವಸ ಬೇಕಾಯಿತೆ ಜಮೀನು ವಶಕ್ಕೆ ಪಡೆಯಲು ಎಂದು ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ಈಗಾಗಲೇ ರೈತರು ಅನುಭವ ಹೊಂದಿರುವ ಜಮೀನು ಗೋಮಾಳದ ಜಮೀನಾಗಿ ಖಾತೆ ಪಹಣಿ ಹೊಂದಿದ್ದು, ನಿಮ್ಮ ಇಲಾಖೆಯೇ ಕಂದಾಯ ಇಲಾಖೆಗೆ ಇದು ಕಂದಾಯ ಇಲಾಖೆಯ ಜಮೀನೆಂದು ತಿಳಿಸಿ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿದೆ ಈಗ ನೀವು ಈ ಜಾಗ ಅರಣ್ಯ ಇಲಾಖೆಯ ಅಧೀನಕ್ಕೆ ಪಡೆಯಲು ರೈತರಿಗೆ ತೊಂದರೆ ನೀಡುವುದನ್ನು ನಾನು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಮೊದಲು ನಿಮ್ಮ ಸ್ವತ್ತು ತಾಲೂಕು ವ್ಯಾಪ್ತಿಯಲ್ಲಿ ಬರುವ ಬಗ್ಗೆ ದಾಖಲೆ ಪಡೆದು ಸರ್ವೇ ಮತ್ತು ಕಂದಾಯ ಇಲಾಖೆ ಯೊಡನೆ ಜಂಟಿ ಸರ್ವೇ ಮಾಡಿ ತಮ್ಮ ಸುಪರ್ದಿಗೆ ಪಡೆಯಿರಿ. ಅದನ್ನು ಬಿಟ್ಟು ಅನಾವಶ್ಯಕ ವಾಗಿ ರೈತರಿಗೆ ತೊಂದರೆ ನೀಡಿದರೆ ಸ್ವತಃ ನಾನೇ ನಿಮ್ಮ ಮೇಲೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನೂ ಸಭೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ನೆಡೆಯುತ್ತಿರುವ ರಸ್ತೆ. ಕಟ್ಟಡ. ಶಾಲಾ ಕಟ್ಟಡ ಕಾಮಗಾರಿ ಯಲ್ಲಿ ಸಾಕಷ್ಟು ಕಳೆಪೆ ಕಾಮಗಾರಿ ನೆಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ಎಸ್.ಕೊಡಗೀಹಳ್ಳಿ ಮತ್ತು ಕಾಳೇನಹಳ್ಳಿ ಸಂಪರ್ಕಕ್ಕೆ 1.5ಕೋಟಿ ಅನುದಾನ ನೀಡಿದರು ಸಹ ಕಾಮಗಾರಿ ಮುಗಿದ ಮರುದಿನವೇ ಡಾಂಬರು ಕಿತ್ತು ಹೊಗಿದೆ ಇದು ಹೇಗೆ ಸಾಧ್ಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾಮಗಾರಿ ಮಾಡಿಸಬೇಕು.
ಕಾಳೇನಹಳ್ಳಿ ಕಾಮಗಾರಿ ಮಾಡುವ ಗುತ್ತಿಗೆದಾರ ಸರಿಯಾಗಿ ಕೆಲಸ ಮಾಡಲ್ಲ ಸರಿಯಾಗಿ ನಿಗಾವಹಿಸು ಎಂದು ಆಯಾ ವ್ಯಾಪ್ತಿಯ ಇಂಜನೀಯರ್ ಗೆ ತಿಳಿಸಿದರು ಯಾರು ಸಹ ಕ್ರಮವಹಿಸಿಲ್ಲ.ಜಿಲ್ಲಾ ಪಂಚಾಯತ್ ಇಂಜನೀಯರ್ ಇಲಾಖೆ ಅಧಿಕಾರಿಗಳು ಕಳ್ಳ ಆಟ ಹಾಡುತ್ತೀರಾ ಸಭೆಗೆ ಹಾಜರಾಗುವಂತೆ ತಿಳಿಸಿದರು ಸಹ ಬೇಕೆಂದು ಸಭೆಗೆ.ಗೈರಾಗಿದ್ದಾರೆ ಎಂದು ಇಂತಹ ಬೇಜವಾಬ್ದಾರಿ ಅಧಿಕಾರಿಗಳ ಮೇಲೆ ಕ್ರಮವಹಿಸಿ ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಇನ್ನೂ ಕೊವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆ ಸೊಂಕು ನಿಯಂತ್ರಣ ಕ್ಕೆ ಅಗತ್ಯ ಕ್ರಮವಹಿಸಿ, ರೋಗಿಗಳ ಪತ್ತೆ ಹಚ್ಚುವ ಬಗ್ಗೆ ಹೆಚ್ಚು ನಿಗಾವಹಿಸಬೇಕು. ತಾಲೂಕು ಶಾಲೆಗಳ ವಿದ್ಯಾರ್ಥಿ ಗಳಿಗೆ ಲಸಿಕೆ ನೀಡುವಲ್ಲಿ ಕ್ರಮವಹಿಸುವಂತೆ ತಿಳಿಸಿದರು.
ತಾಲ್ಲೂಕಿನ ಗ್ರಾಮಗಳಲ್ಲಿ ಕೆಟ್ಟು ಹೋಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಗೆ ಕ್ರಮವಹಿಸಲು ಸಂಬಂಧ ಪಟ್ಟ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳ ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಕುಮಾರ್, ಆಡಳಿತಾಧಿಕಾರಿ ಪುಷ್ಪ, ತಹಶೀಲ್ದಾರ್ ಆರತಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ: ಡಿ.ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy