ತಿಪಟೂರು:ತಿಪಟೂರು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ತೆಂಗಿನಸಸಿ ವಿತರಸಲಾಯಿತು. ತೋಟಗಾರಿಕೆ ಸಹಾಯಕ ನಿರ್ದೇಶಕ ಆಂಜನೇಯ ರೆಡ್ಡಿ ತಂಗಿನ ಸಸಿವಿತರಣೆ ಮಾಡಿದರು.
ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಸಸಿವಿತರಿಸಿದ ಅವರು, ತಿಪಟೂರು ತೋಟಗಾರಿಕೆ ಇಲಾಖೆಯಿಂದ ಗೊರಗೊಂಡನಹಳ್ಳಿ ತೋಟಗಾರಿಕೆ ಫಾರಂ ನಲ್ಲಿ 19ಸಾವಿರ ತೆಂಗಿನ ಸಸಿ ಬೆಳೆಸಲಾಗಿದೆ. ತಿಪಟೂರು ತಳಿಯ ಉತ್ತಮಗುಣಮಟ್ಟದ ಸಸಿಗಳನ್ನ ತೆಂಗಿನ ಸಸಿಯೊಂದಕ್ಕೆ 75 ರೂಪಾಯಿಯಂತೆ ತಾಲ್ಲೂಕಿನ ರೈತರಿಗೆ ಸಸಿ ವಿತರಣೆ ಮಾಡುತ್ತಿದ್ದೇವೆ. ರೈತರು ಪಹಣಿ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳಮನ್ನು ಇಲಾಖೆಗೆ ಸಲ್ಲಿಸಿ ಸಸಿಗಳನ್ನ ಪಡೆಯಬಹುದಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಎಹೆಚ್ ಒ ಚೇತನ್.ಫಾರಂ ನಿರ್ವಾಹಕ ಶ್ರೀನಿವಾಸ್ ಉಪಸ್ಥಿತರಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5