ಈ ವರ್ಷದ ಬಹು ನಿರೀಕ್ಷಿತ ಮಲಯಾಳಂ ಸಿನಿಮಾಗಳಲ್ಲಿ ಒಂದಾದ ಮಮ್ಮುಟ್ಟಿ ಅಭಿನಯದ ಚಿತ್ರ ‘ಟರ್ಬೋ’ ಅದ್ದೂರಿ ಬಿಡುಗಡೆಗೆ ಸಜ್ಜಾಗುತ್ತಿದೆ. ಭಾರೀ ನಿರೀಕ್ಷೆಯ ನಡುವೆ ಇದೀಗ ಮೇ 12 ರಂದು ಚಿತ್ರದ ಟ್ರೈಲರ್ ಅನಾವರಣಗೊಂಡಿದೆ. ಆಕ್ಷನ್-ಪ್ಯಾಕ್ಟ್ ಟ್ರೈಲರ್ ಮಮ್ಮುಟ್ಟಿ ಅವರಿಗೆ ಕನ್ನಡದ ಜನಪ್ರಿಯ ನಟ ರಾಜ್ ಬಿ ಶೆಟ್ಟಿ ಅವರೊಂದಿಗೆ ಮುಖಾಮುಖಿ ಯಾಗುತ್ತಿರುವುದನ್ನು ತೋರಿಸುತ್ತದೆ. ಇನ್ನೇನು ಚಿತ್ರವು ಮೇ 23 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಮಮ್ಮೂಟಿಯವರ 2022 ರ ಚಲನಚಿತ್ರ ‘ಭೀಷ್ಮ ಪರ್ವಂ ನಂತರ ಇದು ಅವರ ಮೊದಲ ಪೂರ್ಣ ಪ್ರಮಾಣದ ಮಾಸ್ ಎಂಟರ್ ಟೈನರ್ ಆಗಿದೆ.
ಟ್ರೇಲರ್ ಕುರಿತು ಹೇಳುವುದಾದರೆ, ‘ಟರ್ಬೊ” ಒಂದು ಆಕ್ಷನ್ ಕಾಮಿಡಿಯಾಗಿದ್ದು, ಇದು ಅನೇಕ ಹೈ-ಆಕ್ಷನ್ ಸೀಕ್ವೆನ್ಸ್ ಗಳನ್ನು ಹೊಂದಿದೆ. ಮೇ 12 ರಂದು, ಮಮ್ಮುಟ್ಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟೈಲರ್‌ನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
‘ಪುಲಿಮುರುಗನ್’ ನಿರ್ದೇಶಕ ವೈಶಾಖ್ ‘ಟರ್ಬೋ’ ಚಿತ್ರಕ್ಕಾಗಿ ಮಮ್ಮುಟ್ಟಿ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದ ಕಥೆಯನ್ನು ‘ಅಂಜಮ್ ಪತಿರಾ’ ಮತ್ತು ‘ಅಬ್ರಹಾಂ ಓಜ್ಜರ್’ ನಿರ್ದೇಶಕ ಮಿಧುನ್ ಮ್ಯಾನುಯೆಲ್ ಥಾಮಸ್ ಬರೆದಿದ್ದಾರೆ. ಮಮ್ಮುಟ್ಟಿ ಕಳೆದ ಕೆಲವು ವರ್ಷಗಳಿಂದ ಸತತ ಹಿಟ್ ಗಳನ್ನ ನೀಡುತ್ತಿದ್ದಾರೆ.
“ಟರ್ಬೊ” ಚಿತ್ರದಲ್ಲಿ ಕನ್ನಡ ನಟ ರಾಜ್ ಬಿ ಶೆಟ್ಟಿ, ತೆಲುಗು ನಟ ಸುನಿಲ್ ಮತ್ತು ಅಂಜನಾ ಜಯಪ್ರಕಾಶ್, ಕಬೀರ್ ದುಹಾನ್ ಸಿಂಗ್, ಸಿದ್ದಿಕ್, ಶಬರೀಶ್ ವರ್ಮಾ ಮತ್ತು ದಿಲೀಶ್ ಪೋತನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296