ಬಿಬಿಎಂಪಿ ವ್ಯಾಪ್ತಿಯಲ್ಲಿ 2019-20ರಿಂದ 2021-22ರ ಅವಧಿಯಲ್ಲಿ 63 ಕಿಮೀ ರಾಜಕಾಲುವೆಗೆ ಬಾಕ್ಸ್ ಮತ್ತು ಯೂ ಟೈಪ್ ಕಾಮಗಾರಿ ನಿರ್ವಹಿಸಲು 7454 ಕೋಟಿ ವೆಚ್ಚವಾಗಿದೆ ಎಂದು ತೋರಿಸಲಾಗಿದೆ. ವಾಸ್ತವದಲ್ಲಿ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸರ್ಕಾರ ರಚಿಸಿರುವ ಎಸ್‌ಐಟಿಗೆ ದೂರು ನೀಡಲಾಗಿದೆ.
ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎನ್, ಅಮರೇಶ್ ಅವರು ಎಸ್‌ಐಟಿಯ ಅಧ್ಯಕ್ಷ ಪಿ. ಸಿ. ಜಾಫರ್ ಅವರಿಗೆ ದಾಖಲೆಗಳ ಸಹಿತ ಪತ್ರ ಸಲ್ಲಿಸಿದ್ದಾರೆ.


