ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರು ಜೈಲಿನೊಳಗೆ ವಿಐಪಿ ಟ್ರೀಟ್ ಮೆಂಟ್ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ನಡುವೆ ಜೈಲಿನ ಸಿಬ್ಬಂದಿಗಳೇ ನಟ ದರ್ಶನ್ ಗೆ ಮಿಲ್ಟ್ರಿ ಹೋಟೆಲ್ ನಿಂದ ಬಿರಿಯಾನಿ, ಎಣ್ಣೆ ಸರಬರಾಜು ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.ವೈರಲ್ ಆಗಿರುವ ಚಿತ್ರವನ್ನು ಕಾರಾಗೃಹ ಇಲಾಖೆ ಗಮನಿಸಿದ್ದು, ಉನ್ನತ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ.
ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಏಳು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ತನಿಖಾ ವರದಿ ಕೇಳಿದೆ.ಇನ್ನೂ ವೈರಲ್ ಆಗಿರುವ ಈ ಚಿತ್ರದಲ್ಲಿ ದರ್ಶನ್ ಜೈಲಿನೊಳಗಿನ ಉದ್ಯಾನವನದಲ್ಲಿ ಕುಳಿತು ಪಾನೀಯ ಮತ್ತು ಸಿಗರೇಟಿನೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು. ಕೆಲವು ಕೈದಿಗಳು ಸಹ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.ದರ್ಶನ್ ಬಳಿ ಕುಳಿತಿರುವ ವ್ಯಕ್ತಿಗಳಲ್ಲಿ ಒಬ್ಬರು (ಕಪ್ಪು ಶರ್ಟ್ ಧರಿಸಿ) ಕುಖ್ಯಾತ ಇತಿಹಾಸ ಶೀಟರ್ ವಿಲ್ಸನ್ ಗಾರ್ಡನ್ ನಾಗಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಕಳೆದ 20 ವರ್ಷಗಳಿಂದ ಕೊಲೆ, ಸುಲಿಗೆ, ಆಫ್ ಮರ್ಡರ್, ಬೆದರಿಕೆ ಸೇರಿದಂತೆ ಹಲವು ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಬಹುಪಾಲು ದಿನಗಳನ್ನು ಕಳೆದಿದ್ದಾನೆ. ಇನ್ನು ಬೆಂಗಳೂರಿನ ಸೆಂಟ್ರಲ್ ಜೈಲು ರೌಡಿ ನಾಗನಿಗೆ ಮಾವನ ಮನೆಯಾಗಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ವಿಲ್ಸನ್ ಗಾರ್ಡನ್ ನಾಗ ತಾಜಾ ಉದಾಹರಣೆ ಆಗಿದ್ದಾನೆ. ಜೈಲಿನಲ್ಲಿದ್ದುಕೊಂಡೇ ತನ್ನ ಶಿಷ್ಯರನ್ನು ಬಿಟ್ಟು ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿಸುತ್ತಿದ್ದಾನೆ ಎಂಬ ಮಾಹಿತಿಯಿದೆ. ಇಂತಹ ನಟೋರಿಯಸ್ ರೌಡಿಯ ಜೊತೆಗೆ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಭರ್ಜರಿಯಾಗಿ ಮಜಾ ಮಾಡುತ್ತಿದ್ದಾನೆ.
ಒಟ್ಟಾರೆ ವಿಲ್ಸನ್ ಗಾರ್ಡನ್ ನಾಗನ ಹೆಸರಿನಲ್ಲಿ 23 ಅಪರಾಧ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 8 ಕೊಲೆ ಕೇಸಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಎ1 ಆರೋಪಿಯಾಗಿದ್ದಾನೆ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸೆಂಟ್ರಲ್ ಜೈಲು ಸೇರಿದ ನಟ ದರ್ಶನ್ ಕೂಡ ನಾಗನೊಂದೊಗೆ ಸೇರಿಕೊಂಡು ಮಜಾ ಮಾಡುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಸಂಜೆ 4.30ಕ್ಕೆ ದರ್ಶನ್ ಅವರು ಇತರ ವ್ಯಕ್ತಿಗಳೊಂದಿಗೆ ವಿಶ್ರಾಂತಿ ಪಡೆಯುತ್ತಿರುವುದು ಮತ್ತು ಚಹಾ ಕುಡಿಯುತ್ತಿರುವುದು ಕಂಡುಬಂದಿದೆ ಎಂದು ನನಗೆ ಮಾಹಿತಿ ಸಿಕ್ಕಿತು. ನಾನು ತಕ್ಷಣ ಕಾರಾಗೃಹಗಳ ಮಹಾನಿರ್ದೇಶಕರನ್ನು ಸಂಪರ್ಕಿಸಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದೆ. ಮಧ್ಯರಾತ್ರಿ 1 ಗಂಟೆಯವರೆಗೆ ವಿಚಾರಣೆ ನಡೆಸಲಾಯಿತು ಎಂದಿದ್ದಾರೆ.
ದರ್ಶನ್ ತೂಗುದೀಪ್ ಜೊತೆಗೆ ಪೋಟೋದಲ್ಲಿ ಕಾಣಿಸಿಕೊಂಡಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಅವರಿಬ್ಬರನ್ನು ಬೇರೆಯ ಜೈಲಿಗೆ ಶಿಫ್ಟ್ ಮಾಡುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಡಿಜಿಪಿ ಅವರ ಆದೇಶದ ಮೇರೆಗೆ ಎಡಿಜಿಪಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


