ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಅಮೃತ ಮಹೋತ್ಸವದ ಆಚರಣೆಗೆ ಸಿದ್ಧವಾಗುತ್ತಿರುವ ಭಾರತೀಯರು , ಈ 75 ವರ್ಷದ ರಾಜಕೀಯ ಇತಿಹಾಸದಲ್ಲಿ ಚುನಾವಣೆಗಳು ಕೇವಲ ಜಾತಿ, ಧರ್ಮ, ಹಣ, ಹೆಂಡ ಮತ್ತು ಅಭಿಮಾನದ ಆಧಾರದ ಮೇಲೆ ನಡೆಯುತ್ತಿದ್ದವು.
ಹೆಸರಿಗಷ್ಟೆ ” ಪ್ರಜಾ ಪ್ರಭುತ್ವ ” ಎಂಬಂತೆ, ಗೆದ್ದು ಬಂದಂತಹ ಜನಪ್ರತಿನಿಧಿಗಳು ರಾಜ ಪ್ರಭುತ್ವದ ವ್ಯವಸ್ಥೆಯನ್ನೇ ಮುಂದುವರಿಸಿ ಕೊಂಡು ಬರುತ್ತಿದ್ದರು. ಯಾವೊಬ್ಬ ಜನಪ್ರತಿನಿದಿಯೂ ಪ್ರಜೆಗಳ ಸಮಸ್ಯೆಗಳನ್ನು ಕೇಳುವುದಾಗಲಿ,ಪಾರದರ್ಶಕ ಆಡಳಿತ ನೀಡುವುದಾಗಲೀ ಮಾಡುತ್ತಿರಲಿಲ್ಲ.
ಯಥಾ ರಾಜ , ತಥಾ ಪ್ರಜೆಯಂತೆ ಚುನಾವಣಾ ಸಂದರ್ಭಗಳಲ್ಲಿ ಹಣ. ಹೆಂಡ, ಜಾತಿ, ಧರ್ಮ ಮತ್ತು ಅಭಿಮಾನದ ಆಮಿಷಕ್ಕೆ ಬಲಿಯಾಗಿ ಭವ್ಯ ಭಾರತದ ಪ್ರಜೆಯು ತನ್ನ ಹಕ್ಕನ್ನು ಮಾರಿಕೊಳ್ಳುತ್ತಿದ್ದರು. ಈ ದೇಶ ಇಷ್ಟೇ, ಈ ಭ್ರಷ್ಟಾಚಾರ ತಡೆಯೋಕೆ ಇನ್ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದಂತೆ , ಪ್ರಜ್ಞಾವಂತ ಜನರಿಗೆ ಆಶಾಕಿರಣದಂತೆ ಗೋಚರಿಸಿದ್ದು ” ಪ್ರಜಾಕೀಯ ” ವೆಂಬ ಕ್ಯಾಶ್ಲೆಸ್ ಪಕ್ಷದ ಸಿದ್ಧಾಂತಗಳು.
ಆಯ್ಕೆಯಾದ ಜನಪ್ರತಿನಿಧಿ “ಸೇವಕ” ನಲ್ಲ ಬದಲಾಗಿ ಆತ ನಮ್ಮೆಲ್ಲರ ತೆರಿಗೆಯಿಂದ ಸಂಬಳ ಪಡೆಯುವ “ಕಾರ್ಮಿಕ ” ಎಂದು ಜನರಿಗೆ ವಿಚಾರಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ತಿಳಿಸುತ್ತಿರುವ ‘ಉಪೇಂದ್ರ’ರವರ ಚಿಂತನೆಗೆ ಕಾರಿಗನೂರಿನ ಜನತೆಯಿಂದ ವ್ಯಾಪಕ ಬೆಂಬಲ ದೊರೆತಿದೆ.
ಇದರ ಫಲವಾಗಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಲ್ಲಿನ ಜನತೆ ಪ್ರಜಾಕೀಯದ ಪ್ರಜಾಕಾರ್ಮಿಕನನ್ನು ಯಾವುದೇ ಆಮಿಷಕ್ಕೂ ಬಗ್ಗದೆ ಪಂಚಾಯ್ತಿಯ ಸದಸ್ಯನನ್ನಾಗಿ ಅರೇಹಳ್ಳಿ ಚೇತನ್’ ರವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಸದಸ್ಯನಾದ ನಂತರ ಚೇತನ್ ‘ರವರು ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು,ತಜ್ಞರೊಂದಿಗೆ ಚರ್ಚಿಸಿ , ಅದಕ್ಕೆ ಸೂಕ್ತವಾದ ಮತ್ತು ಆಯ್ಕೆಗಳುಳ್ಳ ಪರಿಹಾರಗಳನ್ನು ಜನರ ಮುಂದಿಟ್ಟು ಪೋಲಿಂಗ್ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತಿದ್ದಾರೆ.
ರಾಜ್ಯದ 6098 ಗ್ರಾಮ ಪಂಚಾಯ್ತಿಗಳಲ್ಲಿ, 93559 ಸದಸ್ಯರುಗಳಲ್ಲಿ ಪ್ರಜೆಗಳ ಅಭಿಪ್ರಾಯ ಪಡೆದು, ಪ್ರಜೆಗಳು ಹೇಳಿದಂತೆ ಕೆಲಸ ಮಾಡುತ್ತಿರುವ ಜನಪ್ರತಿನಿಧಿ ಅರೇಹಳ್ಳಿ ಚೇತನ್ ಕೆಲಸ ಮಾಡುತ್ತಾರೆ. ಚೇತನ್ ರವರು ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಮತಹಾಕಲು ಮತಗಟ್ಟೆಗೆ ಬಂದಾಗ ಅಲ್ಲಿದ್ದ ಸಾರ್ವಜನಿಕರು ಅವರನ್ನು ಹೆಮ್ಮೆಯ ಮನೋಭಾವ ನೋಡಿದರು.
ದಾವಣಗೆರೆ ಜಿಲ್ಲೆ,ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯ್ತಿಯಲ್ಲಿ 15 ಜನ ಸದಸ್ಯರಿದ್ದು, 15 ಸದಸ್ಯರೂ ಮತ ಚಲಾಯಿಸಿರುವುದರಿಂದ ಶೇಕಡ ನೂರರಷ್ಟು ಮತದಾನವಾದಂತಾಗಿದೆ.
ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ