ಸರಗೂರು: ಸರಗೂರು ಪಟ್ಟಣದಲ್ಲಿ ಇರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಹೋಗುವ ಗರ್ಭಿಣಿಯರ ಹತ್ತಿರ 100 ರೂ. ಗಳನ್ನು ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
BPL ಪಡಿತರ ಚೀಟಿ ಇರುವ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ರಕ್ತ ಪರೀಕ್ಷೆಯನ್ನು ಮಾಡಬೇಕು. LAB ಟೆಕ್ನಿಷಿಯನ್ ಬಳಿ ಈ ಸಂಬಂಧ ವಿಚಾರಿಸಿದಾಗ ನಮಗೆ ಮೇಲಿನ ಅಧಿಕಾರಿಗಳಿಂದ ಆದೇಶವಾಗಿದೆ. ಅದರಂತೆ 100 ರೂ.ಗಳನ್ನು ಪಡೆದು ರಸೀದಿಯನ್ನು ನೀಡುತ್ತಿದ್ದೇವೆ ಎಂದು ಚಂದ್ರ ಮೋಹನ್ ಎಂಬವರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಆರೋಗ್ಯ ಸಹಾಯವಾಣಿಗೆ ಕರೆ ಮಾಡಿ ಇಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ವಿಚಾರಿಸಿದಾಗ Lab ಟೆಕ್ನಿಷಿಯನ್ ಜೊತೆ ಮಾತನಾಡಿ, BPL ಪಡಿತರ ಚೀಟಿ ಇರುವ ಗರ್ಭಿಣಿ ಮಹಿಳೆಯರಿಗೆ ಸೇವೆಗಳು ಉಚಿತವಾಗಿರುತ್ತವೆ. ಆದ್ದರಿಂದ ನೀವು ಪಡೆದಿರುವ 100 ರೂ.ಗಳನ್ನು ಅವರಿಗೆ ಹಿಂದಿರುಗಿಸಿ ಎಂದು ಹೇಳಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಈ ರೀತಿಯ ಅವ್ಯವಸ್ಥೆಯ ಬಗ್ಗೆ THO ರವಿಕುಮಾರ್ ಸರ್ ಅವರ ಗಮನಕ್ಕೂ ತಂದಿದ್ದು, “Ok , I Will look after this issue” ಎಂಬ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಶಾಸಕರು ಇಂತಹ ಅವ್ಯವಸ್ಥೆಗಳು ಆಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿ, ಬಡರೋಗಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದು ಚಂದ್ರ ಮೋಹನ್ ಅವರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿದ್ದು, ಅವರ ಬಳಿಯಲ್ಲಿಯೂ 100 ರೂಪಾಯಿ ಕಿತ್ತುಕೊಳ್ಳುವ ವ್ಯವಸ್ಥೆಯ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರು ಇಂತಹ ಸಮಸ್ಯೆಗಳನ್ನು ಪ್ರಶ್ನೆ ಮಾಡಿದಾಗ ಮಾತ್ರ ಇಂತಹ ಅವ್ಯವಸ್ಥೆಗಳನ್ನು ಸರಿಪಡಿಸಲು ಸಾಧ್ಯ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700