ನಟ, ನಿರ್ದೇಶಕ, ಕಥೆಗಾರ, ಸ್ಯಾಂಡಲ್‌ವುಡ್‌ನ ಮಿಸ್ಟರ್ ಫರ್ಪೆಕ್ಟ್ ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 60ನೇ ವರ್ಷಕ್ಕೆ ಕಾಲಿಟ್ಟಿರುವ ರಮೇಶ್ ಅರವಿಂದ್, ಇನ್ನೂ ಯಂಗ್ ಆಯಂಡ್ ಎನೆರ್ಜೆಟಿಕ್ ಆಗಿದ್ದಾರೆ. ಈ ಸಂಭ್ರಮದ ನಡುವೆಯೇ ರಮೇಶ್ ಇದೀಗ ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನ ಆರೋಪ ಹೊತ್ತು ಜೈಲು ಸೇರಿರುವ ದರ್ಶನ್ ಬಗ್ಗೆ ರಮೇಶ್ ಅರವಿಂದ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿ ಮೂವರು ದರ್ಶನ್‌ಗಳಿದ್ದಾರೆ ಅಂತ ರಮೇಶ್ ಹೇಳಿದ್ದಾರೆ. ಇಷ್ಟು ದಿನ ದರ್ಶನ್ ಬಗ್ಗೆ ನಾನೆಲ್ಲೂ ಮಾತಾಡಿರಲಿಲ್ಲ. ದರ್ಶನ್ ಅಂದಾಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್ ನೆನಪಾಗ್ತಾರೆ. ವೀಕೆಂಡ್ ವಿಥ್ ರಮೇಶ್ ವೇದಿಕೆ ಮೇಲೆ ಕೂತಿದ್ದ ದರ್ಶನ್ ನೆನಪಾಗುತ್ತೆ ಅಂತ ರಮೇಶ್ ನೆನಪಿಸಿಕೊಂಡಿದ್ದಾರೆ.
ನಿನ್ನೆಯ ದರ್ಶನ್, ಇವತ್ತಿನ ದರ್ಶನ್, ನಾಳೆಯ ದರ್ಶನ್ ಇದ್ದಾರೆ ಅಂತ ರಮೇಶ್ ಅರವಿಂದ್ ಹೇಳಿದ್ದಾರೆ. ನಿನ್ನೆಯ ದರ್ಶನ್ ಅವರನ್ನು ಸ್ಟಾರ್ ಆಗಿ ನೋಡಿದ್ವಿ. ಇವತ್ತಿಗೆ ದರ್ಶನ್‌ನ ಇಂಥದ್ದೊಂದು ಸಮಸ್ಯೆಯಲ್ಲಿ, ಪ್ರಕರಣದಲ್ಲಿ ನಾವು ನೋಡ್ತಿದ್ದೀವಿ ಅಂತ ರಮೇಶ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬಹಳ ಮುಖ್ಯವಾಗಿ ನಾವು ನೋಡ್ತಿರೋದು ನಾಳೆಯ ದರ್ಶನ್ ಬಗ್ಗೆ. ದರ್ಶನ್ ಜೈಲಿನಿಂದ ಹೊರಗೆ ಬಂದು, ಹಳೆಯ ಸೂಪರ್ ಸ್ಟಾರ್ ದರ್ಶನ್ ಆಗಿ ನೋಡಬೇಕು ಅನ್ನೋದು ನಮ್ಮ ಆಸೆ. ಬದಲಾದ ದರ್ಶನ್‌ನ ನೋಡ್ಬೇಕು ಅಂತ ರಮೇಶ್ ಅರವಿಂದ್ ಇದೇ ಸಂದರ್ಭದಲ್ಲಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


