ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ಶಂಕಿತ ಉಗ್ರನ ರೇಖಾಚಿತ್ರವನ್ನು ಸಿಸಿಬಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ನಿನ್ನೆಯಷ್ಟೇ ಶಂಕಿತ ಉಗ್ರನ ಸುಳಿವು ನೀಡಿದರೆ 10ಲಕ್ಷ ನಗದು ಬಹುಮಾನ ಕೊಡುವುದಾಗಿ ಸಿಸಿಟಿವಿ ಫೋಟೋವೊಂದನ್ನು ಎನ್ ಐಎ ಬಿಡುಗಡೆ ಮಾಡಿತ್ತು.
ಖ್ಯಾತ ಸ್ಕೆಚ್ ಆರ್ಟಿಸ್ಟ್ ನಿಂದ ಬಾಂಬರ್ ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದ್ದು, ಎನ್ ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಲಾಗಿದೆ.
ಆರ್ಟಿಸ್ಟ್ ಹರ್ಷ ಈ ರೇಖಾಚಿತ್ರವನ್ನು ಬಿಡಿಸಿರುವುದಾಗಿ ವರದಿಯಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


