ಕುದ್ಮಲ್ ರಂಗರಾವ್ ಸ್ಮಾರಕಕ್ಕೆ ದಕ್ಷಿಣಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜೀತ್ ರೈ ಮೇನಾಲ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ಪ್ರವಾಸಿ ಸ್ಮಾರಕ ಆಗುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕುದ್ಮಲ್ ರಂಗರಾವ್ ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದರು. ಡಿ.ಸಿ.ಎಂ. ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕಂಕನಾಡಿ, ಮೂಲ್ಕಿ, ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು ‘ಪಂಚಮ ಶಾಲೆ’ಗಳೆಂದು ಕರೆಯುತಿದ್ದರು ಎಂದು ತಿಳಿಸಿದರು.
ದಲಿತರಿಗೆ ವೃತ್ತಿಪರ ಶಿಕ್ಷಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಡಿ.ಸಿ.ಎಂ. ಮಿಶನ್ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಕೆ ತೋಟಗಾರಿಕೆ, ಕಸೂತಿ, ರೇಷ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ದಲಿತರಿಗೆ ಕೊಡಿಸಿದರು; ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು ಎಂದರು.
ಅನ್ಯರ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದೆಂದು ತೋರಿಸಿಕೊಟ್ಟರು. ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಉಳಿಯ ಬೇಕು ಈಗ ನಮ್ಮದೇ ರಾಜ್ಯ ಸರಕಾರ ಇರುವ ಕಾರಣ ನಮ್ಮ ನಾಯಕರಿಗೆ ಮತ್ತು ಮಂತ್ರಿಗಳಿಗೆ ತಿಳಿಸಿ ಈ ಜಾಗವನ್ನು ಉನ್ನತ ಪ್ರವಾಸಿ ಸ್ಮಾರಕ ತಾಣವಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪತ್ರಿಕೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸೌಕತ್ ಆಲಿ ಮೇನಾಲ ರವರು ಜೊತೆಗಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA