ಶಿವಮೊಗ್ಗ : ಭ್ರಷ್ಟಾಚಾರದಲ್ಲಿ ‘ರ್ಯಾಂಕ್’ ಕೊಟ್ಟರೆ ಬಿವೈ ವಿಜಯೇಂದ್ರನೇ ನಂಬರ್ ಒನ್ ಸ್ಥಾನ ಪಡೆಯಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಕೆಂಗೇರಿಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಮೈಸೂರು ಜಿಲ್ಲಾ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವಿಚಾರಕ್ಕ ಪ್ರತಿಕ್ರಿಯಿಸಿದ ಅವರು, ಹಿಂದುಳಿದ ವರ್ಗದ ನಾಯಕನನ್ನು ತುಳಿಸುವ ಕೆಲಸ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿ ಬಿಜೆಪಿ—ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಸಿಎಂ ಕೇಜ್ರಿವಾಲ್ ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿತ್ತು. ಕೇಜ್ರಿವಾಲ್ ಈಗ ಜೈಲಿನಲ್ಲಿ ಇದ್ದಾರೆ. ಆದರೂ ಒಳ್ಳೆಯ ಆಡಳಿತ ನಡೆಯುತ್ತಿದೆ. ಜೈಲಿಗೆ ಕಳುಹಿಸುವುದು ಅಂದರೆ ಬಿಜೆಪಿಯವರಿಗೆ ಬಹಳ ಖುಷಿ. ವಿಜಯೇಂದ್ರ ಬಗ್ಗೆ ಶಾಸಕ ಯತ್ನಾಳ್ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ನಾಯಿ ತರಹ ಬೈಯುತ್ತಿದ್ದಾರೆ. ಅದರ ಬಗ್ಗೆ ನಾಚಿಕೆ ಇಲ್ವಾ? ಎಂದು ಬಂಗಾರಪ್ಪ ಕಿಡಿಕಾರಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


