ಅಸ್ಸಾಂ: ಅಸ್ಸಾಂನ ಗೋಲಾಘಾಟ್ ಮತ್ತು ನಾಗಾನ್ ಜಿಲ್ಲೆಗಳ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಚಿನ್ನದ ಬಣ್ಣದ ಹುಲಿ ಕಾಣಿಸಿಕೊಂಡಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ದಲ್ಲಿ ಚಿನ್ನದ ಬಣ್ಣದ ನಾಲ್ಕು ಹುಲಿಗಳಿವೆ. ಆದರೆ, ಇವು ಕಾಣಸಿಗುವುದು ಭಾರೀ ಅಪರೂಪ ಎನ್ನಲಾಗಿದೆ. ಈ ಹುಲಿಯ ಮೊದಲ ಫೋಟೋ 2020 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಇತ್ತೀಚೆಗೆ ಚಿನ್ನದ ಬಣ್ಣದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವುಗಳನ್ನು ಅಳಿವಿನಂಚಿನಲ್ಲಿರುವ ಹುಲಿಗಳ ಜಾತಿಯೆಂದು ಪರಿಗಣಿಸಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ‘X’ಖಾತೆಯಲ್ಲಿ ಅಪರೂಪದ ಚಿನ್ನದ ಬಣ್ಣದ ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.