ಬೆಳಗಾವಿ: ಹಿಂಡಲಗಾ ಗ್ರಾಮದ ಕಲ್ಮೇಶ್ವರ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಮಂಗಳವಾರ ಸಂಜೆ ಭೂಮಿ ಪೂಜೆಯನ್ನು ನಡೆಸಿ ಚಾಲನೆ ನೀಡಿದರು.
ಇದೇ ವೇಳೆ, ಹಿಂಡಲಗಾ ಗ್ರಾಮದ ಶ್ರೀನಾಥ ನಗರದ ಚರಂಡಿ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಿ, ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಸಹ ಲಕ್ಷ್ಮೀ ಹೆಬ್ಬಾಳಕರ್ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಆನಂದ ಪಾಟೀಲ, ನಿಖಿಲ ಮಾಸೇಕರ್, ಸಂದೀಪ ಮೊರೆ, ಗಜು ಕಾಕತ್ಕರ್, ರಾಗೋಜಿ, ಪಾಟೀಲ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಕುದುರೆಮನಿಕರ್, ವಿಠ್ಠಲ ದೇಸಾಯಿ, ಅಶೋಕ ಕಾಂಬಳೆ, ರಾಹುಲ್ ಉರನಕರ್, ಪ್ರವೀಣ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


